ವಾಣಿಜ್ಯ

ಸಾಲ ಯೋಜನೆ: ಕರ್ನಾಟಕ ಸೇರಿ 16 ರಾಜ್ಯಗಳಿಗೆ ಮೊದಲ ಕಂತಿನಲ್ಲಿ 6,000 ಕೋಟಿ ರೂ. ಬಿಡುಗಡೆ

Lingaraj Badiger

ನವದೆಹಲಿ: 2020-2021ನೇ ಸಾಲಿಗೆ ಜಿಎಸ್ ಟಿ ಪರಿಹಾರದ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ವಿಶೇಷ ಯೋಜನೆ ಅಡಿ ಸಾಲ ಮಂಜೂರು ಮಾಡಿದೆ. ಕರ್ನಾಟಕ ಸೇರಿ 16 ರಾಜ್ಯಗಳಿಗೆ ಮೊದಲ ಕಂತಿನಲ್ಲಿ 6,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಹಣಕಾಸು ಸಚಿವಾಲಯದ ಜೊತೆ ಸಮನ್ವಯದಿಂದಾಗಿ ಕಂತಿನ ರೂಪದಲ್ಲಿ ಸಾಲ ಪಡೆಯಲು 21 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ಈ ವಿಶೇಷ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದವು.

ಅವುಗಳ ಪೈಕಿ ಐದು ರಾಜ್ಯಗಳಿಗೆ ಜಿಎಸ್ ಟಿ ಪರಿಹಾರದಲ್ಲಿ ಯಾವುದೇ ಕೊರತೆ ಇರಲಿಲ್ಲ. ಇಂದು ಕೇಂದ್ರ ಸರ್ಕಾರ ಕರ್ನಾಟಕ ಸೇರಿ 16 ರಾಜ್ಯಗಳಾದ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಒಡಿಶಾ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾದ ಕೇಂದ್ರಾಡಳಿತ ಪ್ರದೇಶ ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರಗಳಿಗೆ ಮೊದಲ ಕಂತಿನಲ್ಲಿ 6,000 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದೆ. 

SCROLL FOR NEXT