ವಾಣಿಜ್ಯ

ಆನ್ ಲೈನ್ ಮೂಲಕ ಜೀವನ ಪ್ರಮಾಣ ಪತ್ರ ಸಂಗ್ರಹಿಸಲು ಇಪಿಎಫ್‌ಒ ನಿರ್ಧಾರ

Prasad SN

ಈಗಿರುವ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ನೌಕರರ ಪಿಂಚಣಿ ಯೋಜನೆ 1995ರ  ಅಡಿಯಲ್ಲಿ ಬರುವ ಪಿಂಚಣಿದಾರರ ಜೀವನ ಪ್ರಮಾಣ ಪತ್ರವನ್ನು 2021ನೇ ವರ್ಷಕ್ಕೆ ಆನ್ ಲೈನ್ ಮೂಲಕ ಪಡೆದುಕೊಳ್ಳಲು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ನಿರ್ಧರಿಸಿದೆ. 

ಅದರಂತೆ, ಪ್ರಯಾಣದಿಂದ ಮತ್ತು ಜನಸಂದಣಿಯಿಂದ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ, ಎಲ್ಲ ಪಿಂಚಣಿದಾರರು ತಮ್ಮ ಪಿಂಚಣಿ ಪಡೆಯುವ ಬ್ಯಾಂಕ್ ಶಾಖೆ ಅಥವಾ ಸಾಮಾನ್ಯ ಸೇವಾ ಕೇಂದ್ರವನ್ನು ಭೇಟಿ ಮಾಡಿ ತಮ್ಮ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬಹುದು. 

ಪಿಂಚಣಿದಾರರ ಮೊಬೈಲ್ ನಲ್ಲಿ ಉಮಂಗ್ ಆ್ಯಪ್ ಇದ್ದು ಅದಕ್ಕೆ ಬಯೋಮೆಟ್ರಿಕ್ ಸಾಧನವನ್ನು ಅಳವಡಿಸಿಕೊಂಡಿದ್ದರೆ ಇದರ ಮೂಲಕವೂ ಜೀವನ ಪ್ರಮಾಣ ಪತ್ರವನ್ನುಸಲ್ಲಿಸಬಹುದು. 

ಪಿಂಚಣಿದಾರರ ಗಮನಕ್ಕೆ ತರುವುದೇನೆಂದರೆ ಈ ಬಾರಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಿದ ತಿಂಗಳಿಂದ 12 ತಿಂಗಳವರೆಗೆ ಮಾನ್ಯವಾಗಿರುತ್ತದೆ ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ.    

SCROLL FOR NEXT