ವಾಣಿಜ್ಯ

ಆತ್ಮನಿರ್ಭರ್ ಭಾರತಕ್ಕೆ ಪೂರಕವಾಗಿ 400 ಕೋಟಿ ಫಂಡ್ ಘೋಷಿಸಿದ ಪ್ರಾಕ್ಟರ್ ಆಂಡ್ ಗಾಂಬಲ್

Srinivas Rao BV

ಬೆಂಗಳೂರು: ಅಂತಿಮ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚು ಸ್ಥಳೀಯಗೊಳಿಸುವ ಉದ್ದೇಶದಿಂದ ಸಾಮರ್ಥ್ಯದ ನಿರ್ಮಾಣ ಮಾಡಲು ಈಗಿನ ಮತ್ತು ಹೊಸ ಸರಬರಾಜುದಾರರ ಜೊತೆ ಸಹಯೋಗ ಮಾಡಿಕೊಳ್ಳಲು ಪ್ರಾಕ್ಟರ್ ಆಂಡ್ ಗಾಂಬಲ್ (ಪಿ ಆಂಡ್ ಜಿ) ರೂ. 400 ಕೋಟಿಗಳ ಇಂಡಿಯಾ ಗ್ರೋತ್ ಫಂಡ್ ಘೋಷಿಸಿದೆ.

ಭಾರತವನ್ನು ಸ್ವಾವಲಂಬಿಗೊಳಿಸುವ ಸರ್ಕಾರದ ದೂರದೃಷ್ಟಿಗೆ ಮತ್ತು ಬಾಹ್ಯ ಸಹಯೋಗದ ಮೂಲಕ ಭಾರತದಲ್ಲಿ ಸರ್ವ ಬೆಳವಣಿಗೆಯನ್ನು ಪ್ರಚೊದಿಸುವ ಪಿ ಆಂಡ್ ಜಿ ಯ ಬದ್ಧತೆಗೆ ಇದು ಅನುಗುಣವಾಗಿದೆ. ಈ ಹೊಸ ನಿಧಿಯು ಪಿ ಆಂಡ್ ಜಿ ಇಂಡಿಯಾದ ವಿಜಿರೋ ಕಾರ್ಯಕ್ರಮದ ಭಾಗವಾಗಿದ್ದು, ನವೀನ ಉನ್ನತ ಗುಣಮಟ್ಟದ ಪರಿಹಾರಗಳನ್ನು ಒದಗಿಸುವ ಸ್ಟಾರ್ಟಪ್, ಸಣ್ಣ ಉದ್ಯಮ, ವ್ಯಕ್ತಿಗಳು, ಅಥವಾ ಬೃಹತ್ ಸಂಸ್ಥೆಗಳನ್ನು ಗುರುತಿಸಿ, ಸಹಯೋಗ ಮಾಡಿಕೊಳ್ಳುವ ಉದ್ದೇಶವಿದೆ. ಈ ಘೋಷಣೆಯಿಂದ,  ಬಾಹ್ಯ ಔದ್ಯಮಿಕ ಪಾಲುದಾರ ಸಮ್ಮೇಳನದ ಮೂರನೇ ಆವೃತ್ತಿಯನ್ನೂ ಆರಂಭಿಸಿದ್ದು, ಹೊಸ ಮತ್ತು ಹಾಲಿ ಸರಬರಾಜುದಾರರು ಪ್ರಾಕ್ಟರ್ ಆಂಡ್ ಗಾಂಬಲ್ ಆಡಳಿತ ವರ್ಗಕ್ಕೆ ತಮ್ಮ ಪರಿಹಾರಗಳನ್ನು ಪರಿಚಯಿಸಲು ವೇದಿಕೆ ಒದಗಿಸಿದೆ.

ಪ್ರಾಕ್ಟರ್ ಆಂಡ್ ಗಾಂಬಲ್ ಭಾರತೀಯ ಉಪಖಂಡದ ಸಿಇಒ ಮಧುಸುದನ್ ಗೋಪಾಲನ್ ಮಾತನಾಡಿ, ಪ್ರಾಕ್ಟರ್ ಆಂಡ್ ಗಾಂಬಲ್ ಭಾರತದಲ್ಲಿ ಅನೇಕ ದಶಕಗಳಿಂದ ಉತ್ಪಾದಿಸುತ್ತಿದೆ, ಮತ್ತು ಸ್ವಾವಲಂಬಿ ಭಾರತದ ಗುರಿಗೆ ನಾವು ಬದ್ಧರಾಗಿದ್ದೇವೆ. ಭಾರತದಲ್ಲಿ ಮಾರಾಟವಾಗುವ ಶೇ.95 ರಷ್ಟು   ಉತ್ಪನ್ನಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗುತ್ತದೆ. ಭಾರತದಲ್ಲಿ ತಯಾರಾಗುವ ವಸ್ತುಗಳನ್ನು ನಾವು 120 ದೇಶಗಳಿಗೆ ರಫ್ತು ಮಾಡುತ್ತೇವೆ.

ನಮ್ಮ ಬದ್ಧತೆಗೆ ಅನುಗುಣವಾಗಿ, ನಾವು ಪ್ರಾಕ್ಟರ್ ಆಂಡ್ ಗಾಂಬಲ್ಯ ಇಂಡಿಯಾ ಗ್ರೋತ್ ಫಂಡ್ ಅನ್ನು ಸ್ಥಾಪಿಸಿದ್ದು, ಅಂತಿಮ ಉತ್ಪನ್ನಗಳ ಸ್ಥಳೀಯ ತಯಾರಿಕೆ, ಕಚ್ಚಾವಸ್ತುಗಳು ಮತ್ತು ಪ್ಯಾಕೇಜಿಂಗ್ ವಸ್ತುಗಳ ಖರೀದಿಗೆ  ಇದನ್ನು ಬಳಸಲಾಗುತ್ತದೆ, ಮತ್ತು ಭಾರತದ ನಮ್ಮ ಗ್ರಾಹಕರ ಸೇವೆಗೆ ಮಾರಾಟದ ತಂತ್ರಜ್ಞಾನವನ್ನು ವರ್ಧಿಸುವ ನವೀನ ಪರಿಹಾರಗಳನ್ನು ಅಳವಡಿಸಿಕೊಳ್ಳುತ್ತೇವೆ. ಈ ಸಹಯೋಗದಿಂದ ನಾವು ಭಾರತಕ್ಕೆ ಮತ್ತು ವಿಶ್ವಕ್ಕೆ ಭಾರತದಲ್ಲಿ ಉತ್ಪಾದಿಸುವ ಸಾಮರ್ಥ್ಯವನ್ನು ಸಾಧಿಸಲು ಒಂದು ಪರಿಸರವ್ಯವಸ್ಥೆ ಮತ್ತು ಸರಬರಾಜುದಾರರ ಜಾಲವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

SCROLL FOR NEXT