ವಾಣಿಜ್ಯ

ಯುರೋಪಿಯನ್ ಕನ್ಸಲ್ಟೆನ್ಸಿ ಸಂಸ್ಥೆ ಗೈಡ್‌ವಿಷನ್ ಸ್ವಾಧೀನಕ್ಕೆ ತಯಾರಾದ ಇನ್ಫೋಸಿಸ್ 

Raghavendra Adiga

ಬೆಂಗಳೂರು: ಐಟಿ ದಿಗ್ಗಜ ಸಂಸ್ಥೆ  ಇನ್ಫೋಸಿಸ್ ಯುರೋಪಿಯನ್ ಕನ್ಸಲ್ಟೆನ್ಸಿ ಸಂಸ್ಥೆ ಗೈಡ್‌ವಿಷನ್ ಅನ್ನು  ಸ್ವಾಧೀನಪಡಿಸಿಕೊಳ್ಳಲು ಬೋನಸ್ ಸೇರಿದಂತೆ 30 ಮಿಲಿಯನ್ ಯೂರೋಗಳ  ಒಪ್ಪಂದಕ್ಕೆ ಸಹಿ ಹಾಕಿದೆ.

ಗೈಡ್‌ವಿಷನ್  ಸ್ವಾಮ್ಯದ ಸ್ಮಾರ್ಟ್ ಡೇಟಾ ಪುನರಾವರ್ತನೆ ಸಾಧನವಾದ ಸ್ನೋ ಮಿರರ್ ಸೇರಿದಂತೆ ಗೈಡ್‌ವಿಷನ್‌ನ ಎಂಡ್-ಟುಎಂಡ್ ಆಫರ್ ಗಳು ಸಂಕೀರ್ಣ ವ್ಯವಹಾರ ಮತ್ತು ಐಟಿ ಪ್ರಕ್ರಿಯೆಗಳನ್ನು ಸರಳೀಕರಿಸಲು 100 ಕ್ಕೂ ಹೆಚ್ಚು ಬ್ಯುಸಿನೆಸ್ ಕ್ಲೈಂಟ್ ಗಳನ್ನು  ಶಕ್ತಗೊಳಿಸುತ್ತದೆ ಎಂದು ಸೋಮವಾರ  ಇನ್ಫೋಸಿಸ್ ಹೇಳಿದೆ.

ಗೈಡ್‌ವಿಷನ್‌ನ ತರಬೇತಿ ಅಕಾಡೆಮಿ ಮತ್ತು ಜೆಕ್ ರಿಪಬ್ಲಿಕ್, ಹಂಗೇರಿ, ಪೋಲೆಂಡ್‌ ಹಾಗೂ  ಜರ್ಮನಿ ಮತ್ತು ಫಿನ್‌ಲ್ಯಾಂಡ್‌ನಲ್ಲಿ ಇರುವುದರಿಂದ  ಯುರೋಪಿನಲ್ಲಿನ ತನ್ನ ಗ್ರಾಹಕರಿಗೆ ಇನ್ಫೋಸಿಸ್‌ನ ಸರ್ವೀಸ್‌ನೌ ಸಾಮರ್ಥ್ಯವನ್ನು ಬಲಗೊಳಿಸಲು ಸಾಧ್ಯವಾಗಲಿದೆ.

"ನಮ್ಮ ಗ್ರಾಹಕರ ಡಿಜಿಟಲ್ ಆದ್ಯತೆಗಳಿಗೆ ಸಂಬಂಧಿಸಿದ ಸಾಮರ್ಥ್ಯಗಳನ್ನು ಹೆಚ್ಚಿಸುವ ನಮ್ಮ ಪ್ರಯಾಣದಲ್ಲಿ ಈ ಸ್ವಾಧೀನ ಪ್ರಕ್ರಿಯೆ  ಒಂದು ಪ್ರಮುಖ ಮೈಲಿಗಲ್ಲು. ಈ ಕ್ರಮವು ಬೆಳೆಯುತ್ತಿರುವ ಸರ್ವೀಸ್ ನೌವ್ಯವಸ್ಥೆಗೆ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ಖಚಿತಪಡಿಸಿದೆ" ಇನ್ಫೋಸಿಸ್ ಅಧ್ಯಕ್ಷ ರವಿ ಕುಮಾರ್ ಹೇಳಿದ್ದಾರೆ.

"ಗೈಡ್‌ವಿಷನ್‌ನ ಅಸಾಧಾರಣವಾದ ಹೆಚ್ಚಿನ ಗ್ರಾಹಕ ರೇಟಿಂಗ್‌ಗಳು ಉತ್ತಮ ಸಲಹಾ ಮತ್ತು ಅನುಷ್ಠಾನ ಸೇವೆಗಳನ್ನು ತಲುಪಿಸುವ ನಮ್ಮ ನಿರಂತರ ಪ್ರಯತ್ನದ ಫಲಿತಾಂಶವಾಗಿದೆ. ಇನ್ಫೋಸಿಸ್‌ಗೆ ಸೇರ್ಪಡೆಗೊಳ್ಳುವುದರಿಂದ ನಮ್ಮ ಗ್ರಾಹಕರಿಗೆ ನಾವು ಅವರ ಡಿಜಿಟಲ್ ರೂಪಾಂತರದ ಕುರಿತು ನೀಡಬಹುದಾದ ಸೇವೆಗಳ ವಿಸ್ತೃತ ಪ್ರಮಾಣವು ಹೆಚ್ಚಾಗಲಿದೆ" ಗೈಡ್‌ವಿಷನ್‌ನ ಸಹ-ಸಂಸ್ಥಾಪಕ ನಾರ್ಬರ್ಟ್ ನಾಗಿ ಹೇಳಿದ್ದಾರೆ. ವಾಡಿಕೆಯಂತೆ ಮುಕ್ತಾಯದ ಷರತ್ತುಗಳಿಗೆ ಒಳಪಟ್ಟು 2021 ರ ಹಣಕಾಸಿನ ಮೂರನೇ ತ್ರೈಮಾಸಿಕದಲ್ಲಿ ಸ್ವಾಧೀನವು ಸಂಪೂರ್ಣವಾಗುವ ಸಾಧ್ಯತೆ ಇದೆ. 

SCROLL FOR NEXT