ವಾಣಿಜ್ಯ

ರಕ್ಷಣಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಶೇ.74ಕ್ಕೆ ಏರಿಸಿ ಕೇಂದ್ರ ಆದೇಶ

Raghavendra Adiga

ನವದೆಹಲಿ: ಕೇಂದ್ರ ಸರ್ಕಾರವು ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ಮಿತಿಯನ್ನು ಶೇ 49 ರಿಂದ 74ಕ್ಕೆ ಏರಿಕೆ ಮಾಡಿದೆ.

"ರಕ್ಷಣಾ ವಲಯದಲ್ಲಿ ಎಫ್‌ಡಿಐ ನೀತಿಯನ್ನು ತಿದ್ದುಪಡಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಒಪ್ಪಿ ಎಫ್‌ಡಿಐ ಅನ್ನು ಸ್ವಯಂಚಾಲಿತ ಮಾರ್ಗದ ಮೂಲಕ (automatic route) ಶೇ.74 ಕ್ಕೆಹಾಗೂ  ಸರ್ಕಾರಿ ಮಾರ್ಗದ ಮೂಲಕ ಶೇ.74 ಕ್ಕೆಏರಿಕೆ ಮಾಡಲು .ಅನುಮತಿ ನೀಡಲಾಗಿದೆ. ಇದು ಆದಾಯ ಮತ್ತು ಉದ್ಯೋಗ ಕ್ಷೇತ್ರಕ್ಕೆ ಉತ್ತೇಜನಕಾರಿಯಾಗಿದೆ" ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ಟ್ವಿಟರ್‌ನಲ್ಲಿ ಪ್ರಕಟಣೆ ನೀಡಿದ ಗೋಯಲ್, ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗಳನ್ನು ರಾಷ್ಟ್ರೀಯ ಭದ್ರತೆಯ ಆಧಾರದ ಮೇಲೆ ಪರಿಶೀಲನೆಗೆ ಒಳಪಡಿಸಲಾಗುವುದು ಎಂದು ಹೇಳಿದರು.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಸರ್ಕಾರಿ ಮಾರ್ಗದ ಮೂಲಕ ಸೀಮಿತವಾದ ಎಫ್‌ಡಿಐ ಅನ್ನು "ಆಧುನಿಕ ತಂತ್ರಜ್ಞಾನದ ಪ್ರವೇಶಕ್ಕೆ ಕಾರಣವಾಗುವ ಕ್ಷೇತ್ರಗಳಲ್ಲಿ ಮತ್ತು ಇತರ ಕಾರಣಗಳಿಗಾಗಿ ದಾಖಲಿಸಲು" ಶೇಕಡಾ 74ಕ್ಕೆ ಏರಿಸಲಾಗಿದೆ.

"ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗಳು ರಾಷ್ಟ್ರೀಯ ಭದ್ರತೆಯ ಆಧಾರದ ಮೇಲೆ ಪರಿಶೀಲನೆಗೆ ಒಳಪಟ್ಟಿರುತ್ತವೆ. ನಮ್ಮ ಆತ್ಮನಿರ್ಭರ ಭಾರತ ದ ದೃಷ್ಟಿಕೋನಕ್ಕೆ ಅನುಗುಣವಾಗಿ, ತಿದ್ದುಪಡಿಗಳು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ, ಹಾಗೆಯೇ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಭದ್ರತೆಯನ್ನು ಪ್ರಮುಖವಾಗಿರಿಸಿಕೊಳ್ಳುತ್ತವೆ" ಎಂದು ಗೋಯಲ್ ಹೇಳಿದರು.

ಹೊಸ ಕೈಗಾರಿಕಾ ಪರವಾನಗಿಗಳನ್ನು ಬಯಸುವ ಕಂಪನಿಗಳಿಗೆ ಸ್ವಯಂಚಾಲಿತ ಮಾರ್ಗದಡಿಯಲ್ಲಿ ಶೇಕಡಾ 74 ರವರೆಗೆ ಎಫ್‌ಡಿಐಗೆ ಅನುಮತಿ ನೀಡಲಾಗುವುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

SCROLL FOR NEXT