ವಾಣಿಜ್ಯ

15 ದಿನಗಳ ನಂತರ ಮತ್ತೆ ತೈಲೋತ್ಪನ್ನಗಳ ಬೆಲೆ ಇಳಿಕೆ: ಪೆಟ್ರೋಲ್, ಡೀಸಲ್ ಹೊಸ ದರ ಇಂತಿದೆ!

Srinivasamurthy VN

ನವದೆಹಲಿ: 15 ದಿನಗಳ ಬಿಡುವಿನ ಬಳಿಕ ಮತ್ತೆ ತೈಲೋತ್ಪನ್ನಗಳ ಬೆಲೆ ಮತ್ತೆ ಇಳಿಕೆ ಕಂಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 16 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.

ಜಾಗತಿಕ ಮಟ್ಟದಲ್ಲಿ ತೈಲೋತ್ಪನ್ನಗಳ ದರ ಇಳಿಕೆಯಾಗಿರುವುದರಿಂದ ಭಾರತದಲ್ಲಿಯೂ ತೈಲೋತ್ಪನ್ನ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿತ ಮಾಡಿದ್ದು, ಅದರಂತೆ ಪ್ರತೀ ಲೀಟರ್ ಪೆಟ್ರೋಲ್ ದರ 16 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 14 ಪೈಸೆ ಇಳಿಕೆಯಾಗಿದೆ. 

ನೂತನ ದರಗಳ ಅನ್ವಯ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 90.40 ರೂ. ಗೆ ಇಳಿಕೆಯಾಗಿದ್ದು, ಡೀಸೆಲ್ ಪ್ರತೀ ಲೀಟರ್ ಗೆ 80.73 ರೂಗೆ ಇಳಿಕೆಯಾಗಿದೆ.

ಇನ್ನು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರೆಲ್‌ಗೆ 65 ಡಾಲರ್‌ಗಿಂತಲೂ ಕಡಿಮೆಗೆ ಕುಸಿದಿದೆ. ಕಳೆದ ಹದಿನೈದು ದಿನಗಳಿಂದ ಕಚ್ಚಾ ತೈಲ ಬೇಡಿಕೆ ಗಣನೀಯವಾಗಿ ಕುಸಿದಿದ್ದು, ಇದು ದರ ಬದಲಾವಣೆಗೆ ಕಾರಣ ಎನ್ನಲಾಗಿದೆ. ಇದೇ ಕಾರಣಕ್ಕೆ ತೈಲ ಕಂಪನಿಗಳು ದರ ಪರಿಷ್ಕರಣೆಗೆ  ಮುಂದಾಗಿವೆ ಎನ್ನಲಾಗಿದೆ. 

15 ದಿನಗಳ ಹಿಂದೆ ಅಂದರೆ ಮಾರ್ಚ್ 30 ರಂದು ಪ್ರತಿ ಲೀಟರ್‌ಗೆ 22 ಪೈಸೆ ಮತ್ತು 23 ಪೈಸಾ ಇಳಿಕೆಯಾಗಿತ್ತು. ಆದಾಗ್ಯೂ, ಮುಂಬೈ ಮತ್ತು ದೇಶದ ಹಲವು ನಗರಗಳಲ್ಲಿ ಲೀಟರ್‌ಗೆ 100 ರೂ. ಇತ್ತು. 2021 ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 26 ಪಟ್ಟು ಹೆಚ್ಚಾಗಿದ್ದು, ಪೆಟ್ರೋಲ್ ದರ 7.46  ರೂ ಮತ್ತು ಡೀಸೆಲ್ ದರದಲ್ಲಿ 7.60 ರೂ. ಏರಿಕೆಯಾಗಿತ್ತು.

SCROLL FOR NEXT