ವಾಣಿಜ್ಯ

ದೇಶದ ಆರ್ಥಿಕ ಬೆಳವಣಿಗೆ ಪ್ರಮಾಣವನ್ನು ಶೇ.10.4ಕ್ಕೆ ಕಡಿತಗೊಳಿಸಿದ ಎಸ್ ಬಿಐ!

Nagaraja AB

ಮುಂಬೈ: ಸತತ ಮೂರನೇ ದಿನವೂ ಜಾಗತಿಕ ಕೊರೋನಾ ಸೋಂಕಿತ ರಾಷ್ಟ್ರಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಅನೇಕ ರಾಜ್ಯಗಳು ನಿರ್ಬಂಧ ವಿಧಿಸಿರುವಂತೆಯೇ, ಪ್ರಸಕ್ತ ವರ್ಷದ ದೇಶದ ಆರ್ಥಿಕ ಬೆಳವಣಿಗೆ ಪ್ರಮಾಣದ ಮುನ್ಸೂಚನೆಯನ್ನು ಎಸ್ ಬಿಐ ಈ ಹಿಂದೆ ಅಂದಾಜಿಸಿದಂತೆ  ಶೇ. 11 ರಿಂದ ಶೇ. 10. 4 ಕ್ಕೆ  ಇಳಿಕೆ ಮಾಡಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸುಮಾರು 3.34 ಲಕ್ಷ ಹೊಸದಾಗಿ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. 
ಬ್ಯಾಂಕಿನ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಾ ಕಾಂತಿ ಘೋಷ್ ಬರೆದಿರುವ ವರದಿಯು, ತ್ವರಿತಗತಿಯ ಲಸಿಕೆ ಸಂಪೂರ್ಣ ಲಾಕ್ ಡೌನ್ ಗಿಂತಲೂ ಆರ್ಥಿಕತೆ ಮೇಲೆ  ಅಗ್ಗವಾಗಲಿದೆ ಎಂದು ಸಲಹೆ ನೀಡಿದೆ. 

ಈಗ ರಾಜ್ಯಗಳು ಮೇ 1 ರಿಂದ ನೇರವಾಗಿ ಉತ್ಪಾದಕರಿಂದ ಲಸಿಕೆಗಳನ್ನು ಖರೀದಿಸಬಹುದಾಗಿದೆ. ನಮ್ಮ ಅಂದಾಜಿನಂತೆ 13 ದೊಡ್ಡ ರಾಜ್ಯಗಳ ಲಸಿಕೆ ವೆಚ್ಚವು ಅವರ ಜಿಡಿಪಿ ಸಂಗ್ರಹದ ಕೇವಲ ಶೇ. 0.1 ರಷ್ಟಿದೆ. ಲಾಕ್ ಡೌನ್ ನಿಂದ ಈಗಾಗಲೇ ಶೇ.0.7 ರಷ್ಟಿರುವ ಜಿಡಿಪಿಯಲ್ಲಿನ  ಆರ್ಥಿಕ ನಷ್ಟಕ್ಕಿಂತ ಇದು ಗಮನಾರ್ಹವಾಗಿ ಕಡಿಮೆಯಾಗಿದೆ  ಎಂದು ಘೋಷ್ ಹೇಳಿದ್ದಾರೆ. 

ಸದ್ಯದ ಪರಿಸ್ಥಿತಿಯಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಭಾಗಶ: ಸ್ಥಳೀಯ ಮತ್ತು ವಿಕೇಂಡ್ ಲಾಕ್ ಡೌನ್ ಗಳಿದ್ದು, ಆರ್ಥಿಕ ಬೆಳವಣಿಗೆ ದರದ ಮುನ್ಸೂಚನೆಯನ್ನು ಶೇ.10.4ಕ್ಕೆ ಕಡಿತಗೊಳಿಸಿ ಪರಿಷ್ಕರಿಸಿರುವುದಾಗಿ ಘೋಷ್ ತಿಳಿಸಿದ್ದಾರೆ.

SCROLL FOR NEXT