ವಾಣಿಜ್ಯ

ತೇಜಸ್ ಲಘು ಯುದ್ಧ ವಿಮಾನಕ್ಕಾಗಿ ಬಿಇಎಲ್ ನೊಂದಿಗೆ 2,400 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಹೆಚ್ಎಎಲ್ ಸಹಿ

Nagaraja AB

ಬೆಂಗಳೂರು: ಮೇಕ್ ಇಂಡಿಯಾ ಯೋಜನೆಯಡಿ ತೇಜಸ್ ಲಘು ಯುದ್ಧ ವಿಮಾನಕ್ಕಾಗಿ 20 ವಿವಿಧ ಪ್ರಕಾರದ ಸಿಸ್ಟಮ್ ಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೊಂದಿಗೆ ಇಂದು ಒಪ್ಪಂದಕ್ಕೆ ಸಹಿ ಹಾಕಿದೆ.

2023 ರಿಂದ 2028 ರವರೆಗಿನ ಐದು ವರ್ಷಗಳ ಒಪ್ಪಂದವು 2400 ಕೋಟಿ ರೂಪಾಯಿಗಳ ಮೌಲ್ಯದ್ದಾಗಿದೆ ಮತ್ತು ನಿರ್ಣಾಯಕ ಏವಿಯಾನಿಕ್ಸ್ ಲೈನ್ ರಿಪ್ಲೇಸಬಲ್ ಯುನಿಟ್‌ಗಳು (LRUs), ವಿಮಾನ ನಿಯಂತ್ರಣ ಕಂಪ್ಯೂಟರ್ ಗಳು, ನೈಟ್ ಪ್ಲೇಯಿಂಗ್ ಎಲ್ ಆರ್ ಯುಎಸ್ ಗಳನ್ನು ಇದು ಒಳಗೊಂಡಿದೆ.  ಆತ್ಮನಿರ್ಭರ್ ಭಾರತ್’ ಅಭಿಯಾನ ಉತ್ತೇಜಿಸುವ ನಿಟ್ಟಿನಲ್ಲಿಇಲ್ಲಿಯವರೆಗೂು ಯಾವುದೇ ಭಾರತೀಯ ಕಂಪನಿ ಮಾಡಿಲ್ಲದ ಅತಿದೊಡ್ಡ  ಆರ್ಡರ್ ಇದಾಗಿದೆ.  

ಸ್ವದೇಶಿ ಉತ್ಪನ್ನಗಳಿಗೆ ಎಚ್ ಎಎಲ್ ಬದ್ಧವಾಗಿದೆ. ಹೆಚ್ ಎಎಲ್, ಡಿಆರ್ ಡಿಒ ಮತ್ತು ಬಿಇಎಲ್ ನಡುವಿನ ಸಹಕಾರಕ್ಕೆ ಲಘು ಯುದ್ಧ ವಿಮಾನ ಅತ್ಯುತ್ತಮ ಉದಾಹರಣೆಯಾಗಿದೆ. ಪ್ರಸ್ತುತ ಮೇಕ್ ಇನ್ ಇಂಡಿಯಾ ನಿಟ್ಟಿನಲ್ಲಿ ತೇಜಸ್ ಯುದ್ಧ ವಿಮಾನಕ್ಕಾಗಿ 20 ವಿವಿಧ ಪ್ರಕಾರದ ಎಲ್ ಆರ್ ಯುಎಸ್ ಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೆಚ್ ಎಎಲ್ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ತಿಳಿಸಿದ್ದಾರೆ. 

ಪ್ರತಿಷ್ಠಿತ ತೇಜಸ್ ಲಘು ಯುದ್ಧ ವಿಮಾನಕ್ಕಾಗಿ ಹೆಚ್ ಎಎಲ್ ನಿಂದ ಆರ್ಡರ್ ಪಡೆದಿದ್ದು, ಹೆಚ್ ಎಎಲ್ ನೊಂದಿಗೆ ಸದೃಢ ಪಾಲುದಾರಿಕೆ ಮುಂದುವರೆಸಲು ಎದುರು ನೋಡುತ್ತಿರುವುದಾಗಿ ಬಿಇಎಲ್ ಸಿಎಂಡಿ ಆನಂದಿ ರಾಮಲಿಂಗಂ ತಿಳಿಸಿದ್ದಾರೆ. 

ಈ ಸಿಸ್ಟಮ್ ಗಳನ್ನು ಬೆಂಗಳೂರಿನ ಡಿಆರ್‌ಡಿಒ ಮತ್ತು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ವಿವಿಧ ಲ್ಯಾಬ್‌ಗಳು ವಿನ್ಯಾಸ ಮತ್ತು ಅಭಿವೃದ್ಧಿಪಡಿಸುತ್ತಿವೆ. ಒಪ್ಪಂದ ದಾಖಲೆಗಳನ್ನು ತೇಜಸ್ ಯುದ್ಧ ವಿಮಾನ ವಿಭಾಗದ ಜನರಲ್ ಮ್ಯಾನೇಜರ್ ಇ. ಪಿ. ಜಯದೇವ್ ಅವರು, ಬಿಇಎಲ್ (ಇಡಬ್ಲ್ಯೂಅಂಡ್ ಇ) ಜನರಲ್ ಮ್ಯಾನೇಜರ್ ಮನೋಜ್ ಜೈನ್ ಅವರಿಗೆ ಹಸ್ತಾಂತರಿಸಿದರು.

SCROLL FOR NEXT