ರಿಲಾಯನ್ಸ್ ಸಂಸ್ಥೆ (ಸಂಗ್ರಹ ಚಿತ್ರ) 
ವಾಣಿಜ್ಯ

ಬ್ರಿಟನ್ ನ ಬ್ಯಾಟರಿ ಸಂಸ್ಥೆಯನ್ನು 100 ಮಿಲಿಯನ್ ಜಿಬಿಪಿಗೆ ಖರೀದಿಸಿದ ರಿಲಾಯನ್ಸ್

 ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟನ್ ಬ್ಯಾಟರಿ ಉತ್ಪಾದಕ ಸಂಸ್ಥೆ ಫ್ಯಾರಡಿಯನ್ ಲಿಮಿಟೆಡ್ ನ್ನು 100 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್ ಗಳಿಗೆ ಖರೀದಿಸಿದೆ 

ನವದೆಹಲಿ: ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟನ್ ಬ್ಯಾಟರಿ ಉತ್ಪಾದಕ ಸಂಸ್ಥೆ ಫ್ಯಾರಡಿಯನ್ ಲಿಮಿಟೆಡ್ ನ್ನು 100 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್ ಗಳಿಗೆ ಖರೀದಿಸಿದೆ. 

ಈ ಸಂಸ್ಥೆ ರಿಲಾಯನ್ಸ್ ನ ಬಹು-ಬಿಲಿಯನ್ ಡಾಲರ್ ಕ್ಲೀನ್ ಎನರ್ಜಿ ವಿಭಾಗವಾಗಿರುವ ರಿಲಾಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (ಆರ್ ಎನ್ಇಎಸ್ಎಲ್) ನ ಭಾಗವಾಗಿರಲಿದೆ. 

ಫ್ಯಾರಡಿಯನ್ ಲಿಮಿಟೆಡ್ ನಲ್ಲಿ ಈ ಮೂಲಕ ಶೇ.100 ರಷ್ಟು ಪಾಲನ್ನು ಹೊಂದಿರುವ ರಿಲಾಯನ್ಸ್, ಹೆಚ್ಚುವರಿಯಾಗಿ 25 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್ ಗಳನ್ನು ಹೂಡಿಕೆ ಮಾಡಲಿದೆ. 

ಆಕ್ಸ್ಫರ್ಡ್ ಹಾಗೂ ಶೆಫೀಲ್ಡ್ ಮೂಲದ ಸಂಸ್ಥೆಯಾಗಿರುವ ಫ್ಯಾರಡಿಯನ್ ಲಿಮಿಟೆಡ್ ಸೋಡಿಯಮ್-ಐಯಾನ್ ಬ್ಯಾಟರಿ ತಂತ್ರಜ್ಞಾನದ ಪೇಟೆಂಟ್ ನ್ನು ಹೊಂದಿದ್ದು, ಮುಂಚೂಣಿಯಲ್ಲಿರುವ ಜಾಗತಿಕ ಮಟ್ಟದ ಬ್ಯಾಟರಿ ತಂತ್ರಜ್ಞಾನಗಳ ಕಂಪನಿಗಳ ಪೈಕಿ ಒಂದಾಗಿದೆ. 

ಸೋಲಾರ್, ಬ್ಯಾಟರಿ, ಹೈಡ್ರೋಜನ್ ಸೇರಿದಂತೆ ತನ್ನ ಗ್ರೀನ್ ಎನರ್ಜಿ ಉದ್ಯಮಕ್ಕೆ ಹೊಸ ರೂಪವನ್ನು ನೀಡಲು ಆರ್ ಎನ್ಇಎಸ್ಎಲ್ ಈ ಕ್ಷೇತ್ರದಲ್ಲಿನ ಒಂದಷ್ಟು ಸಂಸ್ಥೆಗಳನ್ನು ಖರೀದಿಸಿ, ಹೂಡಿಕೆ ಮಾಡುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT