ವಾಣಿಜ್ಯ

ಕೊರೋನೋತ್ತರ ಭಾರತದ ಆರ್ಥಿಕ ಸಮೀಕ್ಷೆ ಬಲಿಷ್ಠ; ಈ ಬಾರಿ ದಿಕ್ಕು ಬದಲಿಸುವ ಬಜೆಟ್: ಬಿಜೆಪಿ

Srinivas Rao BV

ನವದೆಹಲಿ: ಕೊರೋನೋತ್ತರ ಭಾರತದ ಆರ್ಥಿಕ ಸಮೀಕ್ಷೆ ಬಲಿಷ್ಠವಾಗಿದ್ದು ಎಲ್ಲಾ ವಿಭಾಗಗಳಲ್ಲಿ ವ್ಯಾಪಕವಾಗಿದೆ ಎಂದು ಬಿಜೆಪಿ ಹೇಳಿದೆ. 

2021 ನೇ ಸಾಲಿನ ಬಜೆಟ್ ನ ಅಧಿವೇಶನಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಜೆಪಿ ವಕ್ತಾರ ಗೋಪಾಲ್ ಕೃಷ್ಣ ಅಗರ್ವಾಲ್, ಕೇಂದ್ರ ಸರ್ಕಾರ ಮಂಡಿಸಲಿರುವ 2021  ಸಾಲಿನ ಬಜೆಟ್ ದೇಶದ ದಿಕ್ಕನ್ನೇ ಬದಲಿಸಲಿದ್ದು, ಪೂರ್ಣ ಪ್ರಮಾಣದ ಬೆಂಬಲ ಪಡೆಯದೇ ಇರುವ ಕ್ಷೇತ್ರಗಳತ್ತ ಹೆಚ್ಚಿನ ಗಮನ ಹರಿಸಲಾಗುವುದು ಎಂದು ತಿಳಿಸಿದ್ದಾರೆ. 

ಬಜೆಟ್ ಅಧಿವೇಶನ ಪ್ರಾರಂಭವಾಗುವುದಕ್ಕೂ ಮುನ್ನ ಗೋಪಾಲ್ ಕೃಷ್ಣ ಅಗರ್ವಾಲ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಮೋದಿ ಸರ್ಕಾರ ಬಲಿಷ್ಠ ಸುಧಾರಣೆಗಳ ಪಥದಲ್ಲಿ ನಡೆಯುತ್ತಿದೆ. ಮೋದಿ ಯಥಾ ಸ್ಥಿತಿಯನ್ನು ಮುಂದುವರೆಸುವುದರಲ್ಲಿ ನಂಬಿಕೆ ಹೊಂದಿಲ್ಲ. ಪರಿವರ್ತಕ ಬದಲಾವಣೆಗಳಲ್ಲಿ ನಂಬಿಕೆ ಹೊಂದಿದ್ದಾರೆ. 2014 ರಲ್ಲಿ ಧನ್ ಜನ್ ಯೋಜನೆ ಹಾಗೂ ಪ್ರಧಾನಿ ಕಲ್ಯಾಣ್ ಯೋಜನೆಯಂತಹ ಕಾರ್ಯಕ್ರಮಗಳನ್ನು ದೇಶದ ಜನತೆಗೆ ನೀಡಿದ್ದಾರೆ. ಒಳ್ಳೆಯ ಆರ್ಥಿಕತೆ ಒಳ್ಳೆಯ ರಾಜಕಾರನ ಎಂಬುದು ಮೋದಿ ಅವರ ಧ್ಯೇಯವಾಗಿದೆ" ಎಂದು ಅಗರ್ವಾಲ್ ತಿಳಿಸಿದ್ದಾರೆ. 

2021 ರ ಬಜೆಟ್ ದೇಶ ಮುನ್ನಡೆಯುವ ದಿಕ್ಕನ್ನು ಬದಲಿಸಲಿದೆ. ಪೂರ್ಣಪ್ರಮಾಣದಲ್ಲಿ ಬೆಂಬಲ ಸಿಗದ ಕ್ಷೇತ್ರಗಳನ್ನು ಗುರುತಿಸಿ ಹೆಚ್ಚಿನ ಗಮನ ಹರಿಸಲಾಗುತ್ತದೆ.

ಇದೇ ವೇಳೆ ಆರ್ಥಿಕ ಸಮೀಕ್ಷೆಯಲ್ಲಿ ಕೊರೋನೋತ್ತರ ಭಾರತದ ಆರ್ಥಿಕತೆ ಕುರಿತು ಹಲವು ಏಜೆನ್ಸಿಗಳ ಅಂಕಿ-ಅಂಶಗಳನ್ನು ಅಗರ್ವಾಲ್ ಉಲ್ಲೇಖಿಸಿದ್ದಾರೆ.

ಕ್ಷೀಣಿಸಿದ್ದ ಪರಿಸ್ಥಿತಿಯ ನಂತರ ಚೇತರಿಕೆ ಕಾಣುತ್ತಿದ್ದೇವೆ ಎಂದು ಆರ್ ಬಿಐ ಭಾರತದ ಆರ್ಥಿಕತೆ ಬಗ್ಗೆ ವರದಿ ಪ್ರಕಟಿಸಿದೆ. ಐಎಂಎಫ್ ಸಹ ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇ.11.5 ರಷ್ಟಿರಲಿದೆ ಎಂದು ಹೇಳಿದ್ದು ವೇಗಗತಿಯಲ್ಲಿ ಬೆಳೆಯುತ್ತಿರುವ ವಿಶ್ವದ ಪ್ರಮುಖ ಆರ್ಥಿಕತೆ ಎಂದು ಹೇಳಿರುವುದನ್ನು ಅಗರ್ವಾಲ್ ಉಲ್ಲೇಖಿಸಿದ್ದಾರೆ.

ಕಳೆದ 3 ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ 1 ಲಕ್ಷ ಕೋಟಿಯಷ್ಟು ಏರಿಕೆಯಾಗಿದೆ. ಕ್ರೆಡಿಟ್ ಗ್ರೋಥ್ ಶೇ.7 ರಷ್ಟು ಹೆಚ್ಚಾಗಿದ್ದು ಸರ್ಕಾರದ ಮಾಡುವ ಖರ್ಚು ಶೇ.248 ರಷ್ಟು ಏರಿಕೆಯಾಗಿದೆ. ಮೂಲಸೌಕರ್ಯ, ಸಾಮಾಜಿಕ ಭದ್ರತೆ, ಜನಕಲ್ಯಾಣಕ್ಕಾಗಿ ಸರ್ಕಾರ ಅತಿ ಹೆಚ್ಚು ಖರ್ಚು ಮಾಡಿದೆ. ಕೃಷಿ ಶೇ.3.4 ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಅಗರ್ವಾಲ್ ತಿಳಿಸಿದ್ದಾರೆ.
 

SCROLL FOR NEXT