ನಿರ್ಮಲಾ ಸೀತಾರಾಮನ್ 
ವಾಣಿಜ್ಯ

ಆರ್ಥಿಕ ಸಮೀಕ್ಷೆ: ಹಣಕಾಸು ವರ್ಷ 2021-22ರಲ್ಲಿ ಶೇ.11 ಬೆಳವಣಿಗೆ ನಿರೀಕ್ಷೆ

ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.7 ರಷ್ಟು ಮಟ್ಟಕ್ಕೆ ಕುಗ್ಗಬಹುದು, ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಶೇ.11 ರಷ್ಟು ಪ್ರಗತಿ ಕಾಣಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ ಹೇಳಿದೆ.

ನವದೆಹಲಿ: ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.7 ರಷ್ಟು ಮಟ್ಟಕ್ಕೆ ಕುಗ್ಗಬಹುದು, ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಶೇ.11 ರಷ್ಟು ಪ್ರಗತಿ ಕಾಣಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ ಹೇಳಿದೆ.

ಹಣಕಾಸು ವರ್ಷ 2020-21ರಲ್ಲಿ ಮುಖ್ಯವಾಗಿ ಕೊರೋನಾ ವೈರಸ್ ಸಾಂಕ್ರಾಮಿಕ ಮತ್ತು ನಂತರದ ದೇಶಾದ್ಯಂತದ ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಆರ್ಥಿಕ ಬೆಳವಣಿಗೆ ಕುಸಿತ ದಾಖಲಿಸಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮುನ್ಸೂಚನೆಗಳಿಗೆ ಅನುಗುಣವಾಗಿ ಕೇಂದ್ರ ಬಜೆಟ್ ಗೆ ಎರಡು ದಿನಗಳ ಮುನ್ನ ಆರ್ಥಿಕ ಸಮೀಕ್ಷೆ ಬಹಿರಂಗವಾಗಿದೆ. ಇದು ಮಾರ್ಚ್ 31 ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ ದೇಶದ ಜಿಡಿಪಿ ಶೇಕಡಾ 7.5 ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಹೇಳಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇತ್ತೀಚೆಗೆ 2020-21ರಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ದರವನ್ನು ಶೇಕಡಾ 8 ಕ್ಕೆ ಇಳಿಸಿದೆ. 2022-23ರಲ್ಲಿ ಶೇಕಡಾ 6.8 ಕ್ಕೆ ಇಳಿಯುವ ಮೊದಲು 2021-22ರಲ್ಲಿ ಶೇಕಡಾ 11.5 ರಷ್ಟು ಬೆಳವಣಿಗೆಯ ನಿರೀಕ್ಷೆ ಮಾಡಲಾಗಿದೆ. ಹಾಗೆಯೇ ಎರಡೂ ವರ್ಷಗಳಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯ ಗುರುತನ್ನು ಮರಳಿ ಪಡೆಯಲಿದೆ.

ಜೂನ್ 2020 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಜಿಡಿಪಿ ಶೇಕಡಾ 23.9 ರಷ್ಟು ಕುಗ್ಗಿತು ಮತ್ತು ಸೆಪ್ಟೆಂಬರ್ 2020 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 7.5 ರಷ್ಟು ದಾಖಲಾಗಿದೆ. ಹಣದುಬ್ಬರ ದರದ ಪ್ರಮಾಣ ಶೇ 5ರಂತೆ ತೆಗೆದುಕೊಳ್ಳಲಾಗಿದ್ದು, ಶೇ 4ರಿಂದ 6 ರವರೆಗಿನ ಮಧ್ಯದ ಬಿಂದುವಿನಲ್ಲಿ ಇರಲಿದೆ.

"ವರ್ಷದ ಮಧ್ಯಭಾಗದಲ್ಲಿ ದೀರ್ಘಾವಧಿಯವರೆಗೆ ಪೂರೈಕೆಯನ್ನು ಉತ್ತೇಜಿಸಲು ಮತ್ತು ಉತ್ಪಾದಕ ಸಾಮರ್ಥ್ಯಗಳಿಗೆ ದೀರ್ಘಕಾಲೀನ ಹಾನಿಯನ್ನು ತಪ್ಪಿಸಲು ರಚನಾತ್ಮಕ ಸುಧಾರಣೆಗಳನ್ನು ಘೋಷಿಸಿದ ಏಕೈಕ ದೇಶ ಭಾರತ" ಎಂದು ಸಮೀಕ್ಷೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!

ಭಾರತ-ಶ್ರೀಲಂಕಾ 2ನೇ ಟೆಸ್ಟ್ ಡ್ರಾದಲ್ಲಿ ಅಂತ್ಯ; WTC ಪಾಯಿಂಟ್ಸ್‌ ಟೇಬಲ್‌ನಲ್ಲಿ ಟೀಂ ಇಂಡಿಯಾಗೆ ಭಾರೀ ಹೊಡೆತ!

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಶಿವಕುಮಾರ್