ವಾಣಿಜ್ಯ

ಕರ್ನಾಟಕ ಸೇರಿ ತಮಿಳುನಾಡು, ಆಂಧ್ರದಲ್ಲಿ ಹೂಡಿಕೆ ಮಾಡಲು ಕೈಟೆಕ್ಸ್ ಮಾತುಕತೆ ನಡೆಸುತ್ತಿದೆ: ಸಾಬು ಎಂ ಜಾಕೋಬ್

Vishwanath S

ಕೊಚ್ಚಿ: ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಕೇರಳ ಮೂಲದ ಸಿದ್ದ ಉಡುಪುಗಳ ಉತ್ಪಾದನಾ ಸಂಸ್ಥೆ ಕೈಟೆಕ್ಸ್ ಗಾರ್ಮೆಂಟ್ಸ್ ಮುಂದಾಗುತ್ತಿದೆ ಎಂದು ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಾಬು ಎಂ ಜಾಕೋಬ್ ಹೇಳಿದ್ದಾರೆ. 

ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಕೈಗಾರಿಕಾ ಸಚಿವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಸಾಬು ಜಾಕೋಬ್ ಹೇಳಿದ್ದಾರೆ.

ಇದು ಕೈಟೆಕ್ಸ್ ಗೆ ಒಂದು ಸುವರ್ಣಾವಕಾಶವಾಗಿದೆ. ನಾವು ಎಲ್ಲಾ ರಾಜ್ಯಗಳಿಂದ ಆಕರ್ಷಕ ಬೇಡಿಕೆಗಳು ಬರುತ್ತಿವೆ. ಸೋಮವಾರ ಆಂಧ್ರಪ್ರದೇಶ ಕೈಗಾರಿಕಾ ಸಚಿವರು ನನ್ನನ್ನು ಸಭೆ ಆಹ್ವಾನಿಸಿದ್ದು, ಮುಖ್ಯಮಂತ್ರಿಯೊಂದಿಗೆ ಸಭೆ ಏರ್ಪಡಿಸುವುದಾಗಿ ಹೇಳಿದ್ದಾರೆ. ನಮ್ಮ ಎಲ್ಲ ಅವಶ್ಯಕತೆಗಳನ್ನು ಚರ್ಚಿಸಲಾಗುವುದು. ಆಂಧ್ರದಲ್ಲಿ ಕೈಟೆಕ್ಸ್ ಹೂಡಿಕೆ ಮಾಡಲು ಬಯಸುತ್ತಾರೆ ಎಂದು ಹೇಳಿದರು ಸಾಬು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ತೆಲಂಗಾಣ ಕೈಗಾರಿಕಾ ಸಚಿವ ಕೆ ಟಿ ರಾಮರಾವ್ ಅವರು ಸಚಿವರಿಗಿಂತ ಸಿಇಒರಂತಿದ್ದಾರೆ. 'ಸಚಿವರಿಗೆ ಉದ್ಯಮದ ಬಗ್ಗೆ ಉತ್ತಮ ತಿಳುವಳಿಕೆ ಇದೆ. ನಾವು ಪ್ರಸ್ತಾಪಿಸುವ ಯಾವುದೇ ಸಮಸ್ಯೆಗೆ ಅವರ ಬಳಿ ಪರಿಹಾರವಿದೆ. ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಸರ್ಕಾರದ ಸಹಾಯವನ್ನು ನೀಡಿದರು. ಇತರ ಕೊಡುಗೆಗಳಲ್ಲಿ ರಾಜ್ಯ ಜಿಎಸ್ಟಿ ಮತ್ತು 10 ವರ್ಷಗಳ ಪರವಾನಗಿಯಲ್ಲಿ ರಿಯಾಯಿತಿಗಳು ಸೇರಿವೆ. ತಮಿಳುನಾಡು 6 ವರ್ಷಗಳ ಹೂಡಿಕೆಗೆ 5 ಪ್ರತಿಶತದಷ್ಟು ಬಡ್ಡಿಯನ್ನು ನೀಡಿದರೆ, ತೆಲಂಗಾಣವು 8 ವರ್ಷಗಳವರೆಗೆ ನಮಗೆ 8 ಪ್ರತಿಶತದಷ್ಟು ಬಡ್ಡಿಯನ್ನು ನೀಡಿತು ಎಂದು ಸಾಬು ಹೇಳಿದರು.

ನಾವು ಒಂಬತ್ತು ಕಂಪನಿಗಳನ್ನು ಹೊಂದಿದ್ದೇವೆ ಮತ್ತು ಹೂಡಿಕೆ ಮಾಡಲು ನಮಗೆ ಸಾಕಷ್ಟು ಸಂಪನ್ಮೂಲಗಳಿವೆ. ನಾವು ಕರ್ನಾಟಕ, ಆಂಧ್ರ ಮತ್ತು ತಮಿಳುನಾಡಿನ ಯೋಜನೆಗಳನ್ನು ಪರಿಗಣಿಸುತ್ತಿದ್ದೇವೆ. ನಮ್ಮ ಅಲ್ಯೂಮಿನಿಯಂ ಮತ್ತು ಮಸಾಲೆ ವಿಭಾಗಗಳನ್ನು ಈ ರಾಜ್ಯಗಳಿಗೆ ವರ್ಗಾಯಿಸಲು ನಾವು ಯೋಚಿಸುತ್ತಿದ್ದೇವೆ ಎಂದು ಸಾಬು ಹೇಳಿದರು.

ಕೇರಳ ಸರ್ಕಾರದಿಂದ ಕಿರುಕುಳ ಆರೋಪದ ಹಿನ್ನಲೆಯಲ್ಲಿ 3,500 ಕೋಟಿ ಹೂಡಿಕೆ ಮಾಡುವ ಪ್ರಸ್ತಾಪ ಹಿಂಪಡೆಯಲು ಕೈಟೆಕ್ಸ್ ಸಂಸ್ಥೆ ಚಿಂತನೆ ನಡೆಸಿದೆ. 

SCROLL FOR NEXT