ವಾಣಿಜ್ಯ

ಕೇಂದ್ರ ಸರ್ಕಾರಕ್ಕೆ 99,122 ಕೋಟಿ ರೂ. ವರ್ಗಾವಣೆ ಮಾಡಲು ಆರ್ ಬಿಐ ಮಂಡಳಿ ಗ್ರೀನ್ ಸಿಗ್ನಲ್!

Vishwanath S

ನವದೆಹಲಿ: ಕೇಂದ್ರ ಸರ್ಕಾರಕ್ಕೆ 99,122 ಕೋಟಿ ರೂಪಾಯಿಯನ್ನು ವರ್ಗಾವಣೆ ಮಾಡಲು ಆರ್ ಬಿಐ ಮಂಡಳಿ ಅನುಮೋದನೆ ನೀಡಿದೆ. 

ಆರ್ ಬಿಐನ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡುವ ಸಂಬಂಧ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ಆರ್ ಬಿಐ ಮಂಡಳಿಯ ಸಭೆಯಲ್ಲಿ ಅನಮೋದನೆ ನೀಡಲಾಗಿದೆ. 

ಆರ್‌ಬಿಐ ಮಂಡಳಿಯ ಪ್ರಕಾರ, ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಜಾಗತಿಕ ಮತ್ತು ದೇಶೀಯ ಸವಾಲುಗಳು ಮತ್ತು ಕೋವಿಡ್ ಎರಡನೇ ಅಲೆ ಆರ್ಥಿಕತೆಯ ಮೇಲೆ ಉಂಟು ಮಾಡಿರುವ ಪ್ರತಿಕೂಲ ಪರಿಣಾಮವನ್ನು ತಗ್ಗಿಸುವ ಸಲುವಾಗಿ ಈ ನಿರ್ಣಯವನ್ನು ತೆಗೆದುಕೊಂಡಿದೆ. ಮಾರ್ಚ್ 31ಕ್ಕೆ ಕೊನೆಗೊಂಡ ಒಂಬತ್ತು ತಿಂಗಳ ಲೆಕ್ಕಪತ್ರ ಅವಧಿಯಲ್ಲಿನ 99,122 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ. 

ಸಭೆಯಲ್ಲಿ ಉಪ ಗವರ್ನರ್‌ಗಳಾದ ಮಹೇಶ್ ಕುಮಾರ್ ಜೈನ್, ಮೈಕೆಲ್ ದೇಬಬ್ರತ ಪತ್ರ, ಎಂ.ರಾಜೇಶ್ವರ ರಾವ್, ಟಿ ರಬಿ ಶಂಕರ್ ಭಾಗವಹಿಸಿದ್ದರು. ಕೇಂದ್ರ ಮಂಡಳಿಯ ಇತರ ನಿರ್ದೇಶಕರಾದ ಎನ್ ಚಂದ್ರಶೇಖರನ್, ಸತೀಶ್ ಕೆ ಮರಾಠೆ, ಎಸ್ ಗುರುಮೂರ್ತಿ, ರೇವತಿ ಅಯ್ಯರ್ ಮತ್ತು ಸಚಿನ್ ಚತುರ್ವೇದಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಇನ್ನು ಹಣಕಾಸು ಸೇವೆಗಳ ವಿಭಾಗದ ಕಾರ್ಯದರ್ಶಿ ಡೆಬಾಶಿಶ್ ಪಾಂಡಾ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

SCROLL FOR NEXT