ಕಿರಣ್ ಮಜುಂಮ್ದಾರ್ ಶಾ 
ವಾಣಿಜ್ಯ

ನನ್ನ ಪತಿಯ ಹೆಸರನ್ನು ತಪ್ಪಾಗಿ ಸೇರಿಸಲಾಗಿದೆ: ಪಂಡೋರಾ ಪೇಪರ್ಸ್ ಬಗ್ಗೆ ಕಿರಣ್ ಮಜುಂಮ್ದಾರ್ ಶಾ 

ತೆರಿಗೆ ವಂಚನೆಗೆ ಸಂಬಂಧಿಸಿದ ಹಗರಣವಿರುವ ಪಂಡೋರಾ ಪೇಪರ್ಸ್ ಸೋರಿಕೆಯಾಗಿದ್ದು ಇದರಲ್ಲಿ ಕಿರಣ್ ಮಜುಂಮ್ದಾರ್ ಶಾ ಅವರ ಪತಿಯ ಹೆಸರೂ ಕೇಳಿಬಂದಿದೆ. 

ನವದೆಹಲಿ: ತೆರಿಗೆ ವಂಚನೆಗೆ ಸಂಬಂಧಿಸಿದ ಹಗರಣವಿರುವ ಪಂಡೋರಾ ಪೇಪರ್ಸ್ ಸೋರಿಕೆಯಾಗಿದ್ದು ಇದರಲ್ಲಿ ಕಿರಣ್ ಮಜುಂಮ್ದಾರ್ ಶಾ ಅವರ ಪತಿಯ ಹೆಸರೂ ಕೇಳಿಬಂದಿದೆ. 

ಈ ಬಗ್ಗೆ ಕಿರಣ್ ಮಜುಂಬ್ದಾರ್ ಶಾ ಪ್ರತಿಕ್ರಿಯೆ ನೀಡಿದ್ದು ನನ್ನ ಪತಿಯ ಕಡಲಾಚೆಯ ಟ್ರಸ್ಟ್ ನ ತಪ್ಪಾಗಿ ಸೇರಿಸಲಾಗಿದೆ. ಈ ಟ್ರಸ್ಟ್ ಬೋನಾಫೈಡ್, ಕಾನೂನುಬದ್ಧ ಟ್ರಸ್ಟ್ ಆಗಿದೆ ಎಂದು ಮಜುಂಬ್ದಾರ್ ಶಾ ಹೇಳಿದ್ದಾರೆ. 

ಪಂಡೋರಾ ಪೇಪರ್ಸ್ ಕುರಿತ ಮಾಧ್ಯಮಗಳ ವರದಿಯಲ್ಲಿ ನನ್ನ ಪತಿಯ ಹೆಸರನ್ನು ತಪ್ಪಾಗಿ ಸೇರಿಸಲಾಗಿದೆ. ವರದಿಗಳಲ್ಲಿ ಆರೋಪಿಸಲಾಗಿರುವಂತೆ ಭಾರತದ ಯಾವುದೇ ನಿವಾಸಿಯೂ ಟ್ರಸ್ಟ್ ನ ಪ್ರಮುಖರಾಗಿಲ್ಲ, ಈ ಟ್ರಸ್ಟ್ ನ್ನು ಟ್ರಸ್ಟಿಗಳು ಸ್ವತಂತ್ರವಾಗಿ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಬಯೋಕಾನ್ ಸಂಸ್ಥೆಯ ಅಧ್ಯಕ್ಷರಾಗಿರುವ ಶಾ ಟ್ವೀಟ್ ಮೂಲಕ ತಿಳಿಸಿದ್ದಾರೆ.  

ಜಾಗತಿಕ ಮಟ್ಟದ ಕಾರ್ಪೊರೇಟ್ ಸೇವಾ ಸಂಸ್ಥೆಗಳಿಗೆ ಸಂಬಂಧಿಸಿದ ಕೋಟ್ಯಂತರ ದಾಖಲೆಗಳು ಪಂಡೋರಾ ಪೇಪರ್ಸ್ ನಲ್ಲಿ ಸೋರಿಕೆಯಾಗಿದೆ. ಇದು ಪನಾಮ ಪೇಪರ್ಸ್ ನ ನಂತರ ಬಹಿರಂಗಗೊಂಡಿರುವ ಹಗರಣದ ಕಡತಗಳಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT