ವಾಣಿಜ್ಯ

ಸತತ ಏಳನೇ ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಇಂದಿನ ದರ ಹೀಗಿದೆ

Sumana Upadhyaya

ಮುಂಬೈ: ತೈಲೋತ್ಪನ್ನಗಳ ಬೆಲೆ ಏರಿಕೆ ಸೋಮವಾರ ಕೂಡ ಮುಂದುವರಿದಿದೆ. ಕಳೆದ ಏಳು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗುತ್ತಲೇ ಇದೆ.

ಇಂದು ಕೂಡ ಪೆಟ್ರೋಲ್ ದರದಲ್ಲಿ 30 ಪೈಸೆ ಮತ್ತು ಡೀಸೆಲ್ ಬೆಲೆ 35 ಪೈಸೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ ಇಂದು 104 ರೂಪಾಯಿ 44 ಪೈಸೆಯಾಗಿದ್ದು,  ಡೀಸೆಲ್ ದರ 93 ರೂಪಾಯಿ 17 ಪೈಸೆಯಾಗಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 110 ರೂಪಾಯಿ 41 ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 108 ರೂಪಾಯಿ 07 ಪೈಸೆ ಹಾಗೂ ಲೀಟರ್ ಡೀಸೆಲ್ ದರ 98 ರೂಪಾಯಿ 87 ಪೈಸೆಯಾಗಿದೆ. 

SCROLL FOR NEXT