ವಾಣಿಜ್ಯ

ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡ 4.35ಕ್ಕೆ ಇಳಿಕೆ!

Vishwanath S

ನವದೆಹಲಿ: ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾದ ಪರಿಣಾಮ ಸೆಪ್ಟೆಂಬರ್ ನಲ್ಲಿ ಶೇಕಡ 4.35ಕ್ಕೆ ಇಳಿದಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಹೇಳಿದೆ.

ಆಗಸ್ಟ್ ನಲ್ಲಿ ಶೇಕಡ 5.30ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್ ನಲ್ಲಿ ಶೇ. 4.35ಕ್ಕೆ ಇಳಿದಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಮಾಹಿತಿ ನೀಡಿವೆ. 

ಹಣದುಬ್ಬರವು ಶೇಕಡಾ 6ಕ್ಕಿಂತ ಕಡಿಮೆ ಇರುವ ಸತತ ಮೂರನೇ ತಿಂಗಳು ಇದು. ಮೇ ಮತ್ತು ಜೂನ್ ತಿಂಗಳಲ್ಲಿ ಸಿಪಿಐ ಶೇ. 6 ಕ್ಕಿಂತ ಹೆಚ್ಚಿತ್ತು.

ಆಹಾರ ವಸ್ತುಗಳ ಹಣದುಬ್ಬರವು ಆಗಸ್ಟ್ ನಲ್ಲಿ ಶೇಕಡ 3.11ರಷ್ಟು ಇತ್ತು. ಇದು ಸೆಪ್ಟೆಂಬರ್ ನಲ್ಲಿ ಶೇಕಡ 0.68ಕ್ಕೆ ಇಳಿಕೆ ಆಗಿದೆ.

SCROLL FOR NEXT