ವಾಣಿಜ್ಯ

ಭಾರತದಲ್ಲಿ ಉತ್ಪಾದನೆ ನಿಲ್ಲಿಸಲಿರುವ ಫೋರ್ಡ್

Srinivas Rao BV

ನವದೆಹಲಿ: ಅಮೆರಿಕದ ಆಟೋಮೊಬೈಲ್ ಸಂಸ್ಥೆ ಫೋರ್ಡ್ ಭಾರತದಲ್ಲಿ ತನ್ನ ಎರಡು ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲಿದೆ. ಮುಂದಿನ ದಿನಗಳಲ್ಲಿ ಆಮದು ಮಾಡಿಕೊಂಡ ವಾಹನಗಳನ್ನಷ್ಟೇ ಭಾರತದಲ್ಲಿ ಫೋರ್ಡ್ ಮಾರಾಟ ಮಾಡಲಿದೆ.

ಉತ್ಪಾದನ ಘಟಕಗಳನ್ನು ಮುಂದುವರೆಸುವುದು ಲಾಭದಾಯಕವಲ್ಲ ಆದ್ದರಿಂದ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಆದರೆ ಈಗಿರುವ ಗ್ರಾಹಕರಿಗೆ ಸೇವೆಗಳನ್ನು ಒದಗಿಸಲು ಡೀಲರ್ ಗಳಿಗೆ ಬೆಂಬಲ ನೀಡುವುದಾಗಿ ಫೋರ್ಟ್ ಹೇಳಿದೆ. ಫೋರ್ಟ್ ಉತ್ಪಾದನಾ ಘಟಕಗಳನ್ನು ಮುಚ್ಚಲು ನಿರ್ಧರಿಸಿರುವುದನ್ನು ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾಗೆ ಉಂಟಾದ ಹಿನ್ನೆಡೆ ಎಂದು ವಿಶ್ಲೇಷಿಸಲಾಗುತ್ತಿದೆ.

SCROLL FOR NEXT