ವಾಣಿಜ್ಯ

ದೆಹಲಿ: ಪೈಪ್ ಮೂಲಕ ಅಡುಗೆ ಅನಿಲ ಬೆಲೆ ಪ್ರತಿ ಯೂನಿಟ್‌ಗೆ 2.63 ರೂ. ಹೆಚ್ಚಳ

Lingaraj Badiger

ನವದೆಹಲಿ: ರಾಷ್ಟ್ರ ರಾಜಧಾನಿ ಮತ್ತು ಅಕ್ಕಪಕ್ಕದ ನಗರಗಳಲ್ಲಿ ಪೈಪ್‌ಲೈನ್ ಮೂಲಕ ಅಡುಗೆ ಅನಿಲದ ಬೆಲೆಯನ್ನು ಶುಕ್ರವಾರ ಪ್ರತಿ ಯೂನಿಟ್‌ಗೆ 2.63 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದು ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ದರ ಹೆಚ್ಚಳವಾಗಿದೆ.

ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್‌ನ ಪ್ರಕಾರ, ದೆಹಲಿಯಲ್ಲಿ ಪೈಪ್ಡ್ ಅಡುಗೆ ಅನಿಲವು ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ 50.59 ರೂ.ಗಳಾಗಿದ್ದು, ಈ ಹಿಂದೆ ರೂ. 47.96 ರಷ್ಟಿತ್ತು. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಆಟೋಮೊಬೈಲ್‌ಗಳಿಗೆ ಸಿಎನ್‌ಜಿ ಮತ್ತು ರಾಷ್ಟ್ರ ರಾಜಧಾನಿ ಹಾಗೂ ಪಕ್ಕದ ಪಟ್ಟಣಗಳಲ್ಲಿ ಮನೆಗಳಿಗೆ ಪೈಪ್ ಮೂಲಕ ಅಡುಗೆ ಅನಿಲವನ್ನು ಪೂರೈಕೆ ಮಾಡುವ ಸಂಸ್ಥೆಯಾಗಿದೆ.

"ಇನ್‌ಪುಟ್ ಗ್ಯಾಸ್ ವೆಚ್ಚದಲ್ಲಿನ ಹೆಚ್ಚಳವನ್ನು ಭಾಗಶಃ ಸರಿದೂಗಿಸಲು ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಬೆಲೆ ಹೆಚ್ಚಿಸಲಾಗಿದೆ" ಎಂದು ಐಜಿಎಲ್ ಟ್ವೀಟ್‌ನಲ್ಲಿ ತಿಳಿಸಿದೆ.

ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಇದು ಎರಡನೇ ಬಾರಿ ಬೆಲೆ ಏರಿಕೆಯಾಗಿದೆ. ಕಳೆದ ಜುಲೈ 26 ರಂದು ದರ ಪರಿಷ್ಕರಿಸಿದ್ದ ಐಜಿಎಲ್ ಪ್ರತಿ ಯೂನಿಟ್‌ಗೆ 2.1 ರೂ. ಹೆಚ್ಚಳ ಮಾಡಿತ್ತು.

SCROLL FOR NEXT