ವಾಣಿಜ್ಯ

2023 ರಿಂದ ಟಾಲ್ಕ್ ಬೇಬಿ ಪೌಡರ್ ಬಂದ್; ಜೋಳದ ಹಿಟ್ಟು ಆಧಾರಿತ ಪೌಡರ್ ಮಾರಾಟ: ಜಾನ್ಸನ್ & ಜಾನ್ಸನ್ ಸಂಸ್ಥೆ

Srinivas Rao BV

ನವದೆಹಲಿ: ಜಾನ್ಸನ್& ಜಾನ್ಸನ್ ಯ ಟಾಲ್ಕ್ ಆಧಾರಿತ ಬೇಬಿ ಪೌಡರ್ ಮಾರಾಟ 2023 ರಿಂದ ಜಾಗತಿಕವಾಗಿ ಬಂದ್ ಆಗಲಿದೆ. ಸ್ವತಃ ಸಂಸ್ಥೆ ಈ ವಿಷಯವನ್ನು ಸ್ಪಷ್ಟಪಡಿಸಿದೆ.

ಜಾನ್ಸನ್&ಜಾನ್ಸನ್ ಸಂಸ್ಥೆಯ ಬೇಬಿ ಪೌಡರ್ ಬಗ್ಗೆ ಗ್ರಾಹಕ ಸುರಕ್ಷತೆಗೆ ಸಂಬಂಧಿಸಿದ ಹಲವು ಪ್ರಕರಣಗಳು ದಾಖಲಾಗಿದ್ದವು ಹಾಗೂ 2 ವರ್ಷಗಳ ಹಿಂದೆ ಅಮೆರಿಕದಲ್ಲಿ ಮಾರಾಟವನ್ನು ಬಂದ್ ಮಾಡಿತ್ತು. 

ಜಾಗತಿಕ ಮಟ್ಟದಲ್ಲಿ ಬಂಡವಾಳ ಮೌಲ್ಯಮಾಪನದ ಬಳಿಕ, ನಾವು ಜೋಳದ ಹಿಟ್ಟು ಆಧಾರಿತ (ಕಾರ್ನ್ ಸ್ಟಾರ್ಚ್) ಬೇಬಿ ಪೌಡರ್ ಗೆ ವರ್ಗಾವಣೆಯಾಗುವುದಕ್ಕೆ ವಾಣಿಜ್ಯ ನಿರ್ಧಾರ ಕೈಗೊಂಡಿದ್ದೇವೆ, ಜಾಗತಿಕವಾಗಿ ಜೋಳದ ಹಿಟ್ಟು ಆಧಾರಿತ ಬೇಬಿ ಪೌಡರ್ ಗಳು ಈಗಾಗಲೇ ಮಾರಾಟವಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.
 
ಗ್ರಾಹಕ ಸುರಕ್ಷತೆಗೆ ಸಂಬಂಧಿಸಿದ ತೀವ್ರ ಹಿನ್ನಡೆ ಅನುಭವಿಸಿದ್ದರ ಪರಿಣಾಮ 2020 ರಲ್ಲಿ ಜೆ&ಜೆ ಅಮೆರಿಕ ಹಾಗೂ ಕೆನಡಾಗಳಲ್ಲಿ ಟಾಲ್ಕ್ ಬೇಬಿ ಪೌಡರ್ ಮಾರಾಟ ಬಂದ್ ಮಾಡುವುದಾಗಿ ಘೋಷಿಸಿತ್ತು. ಟಾಲ್ಕ್ ಪೌಡರ್ ನ ಉತ್ಪನ್ನಗಳು ಕ್ಯಾನ್ಸರ್ ಉಂಟು ಮಾಡುತ್ತಿದೆ ಎಂದು ಆರೋಪಿಸಿ 38,000 ಅರ್ಜಿಗಳು ಕೋರ್ಟ್ ಗೆ ಸಲ್ಲಿಕೆಯಾಗಿತ್ತು.

SCROLL FOR NEXT