ಸೆನ್ಸೆಕ್ಸ್ ನ್ನು ಮಕಾಡೆ ಮಲಗಿಸಿದ ಕೋವಿಡ್ ಆತಂತ!
ಜಾಗತಿಕ ಮಟ್ಟದಲ್ಲಿ ಮತ್ತೆ ಸದ್ದು ಮಾಡುತ್ತಿರುವ ಕೊರೋನಾ ಸುದ್ದಿ ಸೆನ್ಸೆಕ್ಸ್ ಮೇಲೆ ಪರಿಣಾಮ ಉಂಟುಮಾಡಿದೆ.
ಮುಂಬೈ: ಜಾಗತಿಕ ಮಟ್ಟದಲ್ಲಿ ಮತ್ತೆ ಸದ್ದು ಮಾಡುತ್ತಿರುವ ಕೊರೋನಾ ಸುದ್ದಿ ಸೆನ್ಸೆಕ್ಸ್ ಮೇಲೆ ಪರಿಣಾಮ ಉಂಟುಮಾಡಿದೆ.
ಕೋವಿಡ್ ನ ಹೊಸ ರೂಪಾಂತರಿಯ ಭೀತಿಯಿಂದಾಗಿ ಸೆನ್ಸೆಕ್ಸ್ 1,000 ಅಂಕಗಳಷ್ಟು ಕುಸಿತ ಕಂಡಿದೆ. ಕೋವಿಡ್-19 ಪರಿಣಾಮದಿಂದ ಹೂಡಿಕೆದಾರರಲ್ಲಿ ಭೀತಿ ಮೂಡಿದ್ದು, ಸತತ 4 ನೇ ನೇರ ಸೆಷನ್ ನಲ್ಲಿ ಹಾಗೂ ಮೂರು ತಿಂಗಳ ಅವಧಿಯಲ್ಲಿ ದಿನವೊಂದರಲ್ಲೇ ಅಧಿಕ ಕುಸಿತ ದಾಖಲಾಗಿದೆ.
59,84.29 ಅಂಕಗಳೊಂದಿಗೆ ಸೆನ್ಸೆಕ್ಸ್ ಸೆಷನ್ ಮುಕ್ತಾಯಗೊಂಡಿದ್ದು 980.93 ಅಂಕಗಳಷ್ಟು ಅಥವಾ ಶೇ.1.61 ರಷ್ಟು ಇಳಿಕೆ ದಾಖಲಾಗಿದೆ ನಿಫ್ಟಿ 17,806.80 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.
ನಿಫ್ಟಿಯ 50 ಸ್ಟಾಕ್ ಗಳ ಪೈಕಿ ಅದಾನಿ ಪೋರ್ಟ್, ಅದಾನಿ ಎಂಟರ್ ಪ್ರೈಸಸ್, ಹಿಂಡಾಲ್ಕೊ, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್ ಸೆನ್ಸೆಕ್ಸ್ ನಲ್ಲಿ ಇಳಿಕೆ ಕಂಡ 5 ಪ್ರಮುಖ ನಷ್ಟದಾರ ಸಂಸ್ಥೆಗಳಾಗಿದ್ದರೆ, ಸಿಪ್ಲಾ, ಡಿವೀಸ್ ಲ್ಯಾಬ್ಸ್, ಟೈಟಾನ್ ಗಳು ಗಳಿಕೆ ಕಂಡಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.