ವಾಣಿಜ್ಯ

ದಿನನಿತ್ಯ ಬಳಕೆಯ ಅಡುಗೆ ಎಣ್ಣೆ ದರ 10 ರೂ. ಇಳಿಕೆ ಮಾಡಲು ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ

Sumana Upadhyaya

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುವಾರ ಕೂಡ ಸತತವಾಗಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಿಂತ ಕೆಳಗೆ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಸಂಭಾವ್ಯ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿತ ತೈಲ ಬೇಡಿಕೆ ಮೇಲೆ ಪರಿಣಾಮವನ್ನುಂಟುಮಾಡುವ ಸಾಧ್ಯತೆಯಿದೆ.

ಪ್ರಪಂಚದಾದ್ಯಂತ ಕೇಂದ್ರೀಯ ಬ್ಯಾಂಕುಗಳು ಹಣದುಬ್ಬರವನ್ನು ಎದುರಿಸಲು ಬಡ್ಡಿದರಗಳನ್ನು ಹೆಚ್ಚಿಸಿದ್ದರಿಂದ ತೈಲ, ಲೋಹಗಳು ಮತ್ತು ತಾಳೆ ಎಣ್ಣೆಗಳ ಬೆಲೆ ಕುಸಿದಿದೆ ಎಂದು ವಿಶ್ಲೇಷಿಸಲಾಗಿದೆ. ಇದು ಸರಕುಗಳ ಬೇಡಿಕೆಯನ್ನು ತಗ್ಗಿಸುವ ಹಿಂಜರಿತದ ಭಯವನ್ನು ಉಂಟುಮಾಡುತ್ತದೆ.

ಅಡುಗೆ ಎಣ್ಣೆ ಇಳಿಸಲು ಕೇಂದ್ರ ಸರ್ಕಾರ ಸೂಚನೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ, ತಾಳೆ ಎಣ್ಣೆಗಳ ಬೆಲೆ ಇಳಿಕೆಯಾಗುತ್ತಿದ್ದಂತೆ ನಾವು ದಿನನಿತ್ಯ ಅಡುಗೆಗೆ ಬಳಸುವ ಎಣ್ಣೆಯ ಬೆಲೆಯನ್ನು (Cooking oil price) ಲೀಟರ್ ಗೆ 10 ರೂಪಾಯಿಗಳಷ್ಟು ಇನ್ನೊಂದು ವಾರದೊಳಗೆ ಇಳಿಸಲು ತಯಾರಿಕಾ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.ಅಲ್ಲದೆ ಏಕರೂಪ ಬೆಲೆಯನ್ನು ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಭಾರತ ತನ್ನ ಅಡುಗೆ ಅನಿಲ ಬೇಡಿಕೆಯ ಶೇಕಡಾ 60ರಷ್ಟನ್ನು ಆಮದಿನ ಮೇಲೆ ಅವಲಂಬಿತವಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾದಾಗ ಅದು ನಮ್ಮ ದೇಶದ ಮಾರುಕಟ್ಟೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಕೇಂದ್ರ ಸರ್ಕಾರ ಮಾಡಿರುವ ಸೂಚನೆಗೆ ಎಲ್ಲಾ ಪ್ರಮುಖ ತೈಲ ತಯಾರಿಕಾ ಮತ್ತು ಮಾರುಕಟ್ಟೆ ಕಂಪೆನಿಗಳು ಒಪ್ಪಿಗೆ ಸೂಚಿಸಿದ್ದು ಇನ್ನೊಂದು ವಾರದಲ್ಲಿ ಅಡುಗೆ ತೈಲ ಇಳಿಕೆಯಾಗುವ ಸಾಧ್ಯತೆ ನಿಚ್ಛಳವಾಗಿದೆ. 

ಇದರಿಂದ ಗ್ರಾಹಕರು ಸಾಮಾನ್ಯ ಜನರು ಸ್ವಲ್ಪ ಮಟ್ಟಿಗೆ ನಿರಾಳರಾಗಬಹುದು. ಕಳೆದೊಂದು ತಿಂಗಳಿನಿಂದ ನೆಲಗಡಲೆ ಮತ್ತು ವನಸ್ಪತಿ ಹೊರತುಪಡಿಸಿ ತಾಳೆ, ಸೂರ್ಯಕಾಂತಿ, ಸೋಯಾಬಿನ್ ಎಣ್ಣೆ ಬೆಲೆ ಇಳಿಕೆಯಾಗಿದೆ. ಕಳೆದ ಕೆಲ ತಿಂಗಳಿನಿಂದ ಕೇಂದ್ರ ಸರ್ಕಾರ ತೆಗೆದುಕೊಂಡ ಕೆಲವು ಕ್ರಮಗಳು ಸಹ ಇದಕ್ಕೆ ಕಾರಣವಾದವು. 

SCROLL FOR NEXT