ಸಾಂದರ್ಭಿಕ ಚಿತ್ರ 
ವಾಣಿಜ್ಯ

ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ: ಸಿಂಗಾಪುರಕ್ಕೆ ಅಗ್ರಸ್ಥಾನ!

ವಾಣಿಜ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಿರುವ ರಾಷ್ಟ್ರಗಳ ಪೈಕಿ ಸಿಂಗಾಪುರ, ಅಮೆರಿಕಾ, ನೇದರ್ ಲ್ಯಾಂಡ್ಸ್ ಮತ್ತು ಸ್ವಿಟ್ಜರ್ಲ್ಯಾಂಡ್ ಟಾಪ್ 5 ರಾಷ್ಟ್ರಗಳಾಗಿ  ಹೊರಹೊಮ್ಮಿವೆ.

ನವದೆಹಲಿ: ವಾಣಿಜ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಿರುವ ರಾಷ್ಟ್ರಗಳ ಪೈಕಿ ಸಿಂಗಾಪುರ, ಅಮೆರಿಕಾ, ನೇದರ್ ಲ್ಯಾಂಡ್ಸ್ ಮತ್ತು ಸ್ವಿಟ್ಜರ್ಲ್ಯಾಂಡ್ ಟಾಪ್ 5 ರಾಷ್ಟ್ರಗಳಾಗಿ  ಹೊರಹೊಮ್ಮಿವೆ. ಸಿಂಗಾಪುರ ಗರಿಷ್ಠ ಶೇ .27 ರಷ್ಟು ಎಫ್ ಡಿಐ ಹೂಡಿಕೆ ಮಾಡಿದ್ದರೆ, ನಂತರ ಅಮೆರಿಕಾ ಶೇ. 17. 94 ಮತ್ತು ಮಾರಿಷಿಯಸ್  ಶೇ. 15. 98 ರಷ್ಟು ಕೊಡುಗೆ ನೀಡಿವೆ.

ಭಾರತಕ್ಕೆ ಎಫ್ ಡಿಐ ಒಳಹರಿವಿನ ಮೂರು ದಶಕಗಳ ಅನುಭವದಲ್ಲಿ ಮಾರಿಷಿಯಸ್ ಅನುಕೂಲಕರವಾದ ಅಂತಾರಾಷ್ಟ್ರೀಯ ಮಾನ್ಯತೆಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಸುಲಭ ಜೀವನ ನಿರ್ವಹಣೆ ಮತ್ತು ಜಾಗತಿಕ ಸೇವಾ ಪೂರೈಕದಾರರು ಭಾರತದಲ್ಲಿ ಹೂಡಿಕೆ ಮಾಡಲು ಮಾರಿಷಿಯಸ್ ವೇದಿಕೆಗಳಿಗೆ ಅಗತ್ಯ ವಿಶ್ವಾಸ ಮೂಡಿಸಿವೆ ಎಂದು ಮಾರಿಷಿಯಸ್ ಸನ್ನೆ ಗ್ರೂಪ್ ವ್ಯವಹಾರ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಹಾಗೂ ನಿರ್ದೇಶಕ ವರುನೆನ್ ಗೋಯಿಂಡೆನ್ ತಿಳಿಸಿದ್ದಾರೆ.

ಅಂಕ್ಟಾಡ್ ವಿಶ್ವ ಹೂಡಿಕೆ ವರದಿ 2022 ಪ್ರಕಾರ, 2021ರ 20 ಆರ್ಥಿಕತೆಯ ರಾಷ್ಟ್ರಗಳ ಪೈಕಿ ಭಾರತದ ಶ್ರೇಯಾಂಕದಲ್ಲಿ ಸುಧಾರಣೆಯಾಗಿದ್ದು, ಏಳನೇ ಸ್ಥಾನದಲ್ಲಿದೆ. ಈ  ಹಿಂದಿನ ವರ್ಷಕ್ಕೆ ಹೋಲಿಸಿದರೆ 2022ರ ಆರ್ಥಿಕ ವರ್ಷದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಎಫ್ ಡಿಐ ಶೇ. 21. 34 ಬಿಲಿಯನ್ ಆಗಿದ್ದು, ಶೇ. 76 ರಷ್ಟು ಏರಿಕೆಯಾಗಿದೆ. ಈ ಹಿಂದೆ  ಶೇ. 12. 9 ಬಿಲಿಯನ್ ಆಗಿತ್ತು ಎಂದು ಸರ್ಕಾರ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT