ವಾಣಿಜ್ಯ

2022ರ ಮೊದಲ ತ್ರೈಮಾಸಿಕ ಭಾರತದಲ್ಲಿ ಮೊಬೈಲ್ ಮೂಲಕ 44.68 ಲಕ್ಷ ಕೋಟಿ ರೂಪಾಯಿ ವಹಿವಾಟು!

Srinivas Rao BV

ಬೆಂಗಳೂರು: ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ಮೊಬೈಲ್ ಮೂಲಕ ನಡೆಸುವ ವಹಿವಾಟುಗಳ ಸಂಖ್ಯೆಯೂ ಏರಿಕೆಯಾಗತೊಡಗಿವೆ. 

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮೊಬೈಲ್ ಮೂಲಕ 44.68 ಲಕ್ಷ ಕೋಟಿ ರೂಪಾಯಿ ಹಾಗೂ ಅಂತರ್ಜಾಲದ ಮೂಲಕ 163.53 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆದಿದೆ.
 
ಭಾರತದಲ್ಲಿ 120 ಕೋಟಿ ಮೊಬೈಲ್ ಗ್ರಾಹಕರಿದ್ದು, 65.8 ಕೋಟಿ ಅಂತರ್ಜಾಲ ಬಳಕೆದಾರರಿದ್ದಾರೆ. ಗ್ರಾಹಕರು 1,560 ಕೋಟಿ ರೂಪಾಯಿ (15.6 ಬಿಲಿಯನ್) ಮೊಬೈಲ್ ಆಧಾರಿತ ಪಾವತಿಗಳನ್ನು ಮಾಡಿದ್ದು, ನೆಟ್ ಬ್ಯಾಂಕಿಂಗ್ ಹಾಗೂ ಅಂತರ್ಜಾಲ ಆಧಾರಿತ ವಹಿವಾಟುಗಳು 100 ಕೋಟಿಗೂ ಮೀರಿದೆ ಎಂದು ಪಾವತಿ ಪ್ರೊಸೆಸರ್ ವರ್ಲ್ಡ್‌ಲೈನ್‌ನ ಇಂಡಿಯಾ ಡಿಜಿಟಲ್ ಪಾವತಿಯ ವರದಿ ಹೇಳಿದೆ.
 
ವರದಿಯ ಪ್ರಕಾರ ಸಣ್ಣ ಪ್ರಮಾಣದ ವಹಿವಾಟುಗಳಿಗೆ ಮೊಬೈಲ್ ಪಾವತಿಗಳನ್ನು ಬಳಕೆ ಮಾಡಲಾಗುತ್ತಿದೆ ಹಾಗೂ ಇಂಟರ್ ನೆಟ್ ಬ್ರೌಸರ್ ಗಳನ್ನು ಇ-ಕಾಮರ್ಸ್ ವೇದಿಕೆಗಳಲ್ಲಿ ಬಳಕೆ ಮಾಡಲಾಗುತ್ತಿದೆ. 

SCROLL FOR NEXT