ವಾಣಿಜ್ಯ

ಅಮೆರಿಕ ನಂತರ, ಭಾರತದಲ್ಲೂ ಟ್ವಿಟರ್ ಸಿಬ್ಬಂದಿ ವಜಾ; ಎರಡು ವಿಭಾಗ ಸಂಪೂರ್ಣ ಬಂದ್!

Lingaraj Badiger

ನವದೆಹಲಿ: ಮೈಕ್ರೊಬ್ಲಾಗಿಂಗ್ ವೆಬ್ ಸೈಟ್ ಟ್ವಿಟರ್ ಜಾಗತಿಕ ಮಟ್ಟದ ಉದ್ಯೋಗ ಕಡಿತದ ಭಾಗವಾಗಿ ಅಮೆರಿಕದ ನಂತರ ಭಾರತದಲ್ಲೂ ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು, ಎರಡು ಇಲಾಖೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನ ಹೊಸ ಮಾಲೀಕ ಎಲೋನ್ ಮಸ್ಕ್ ಅವರು ಆರ್ಥಿಕತೆಯನ್ನು ಸಾಧಿಸಲು ಸಾಮೂಹಿಕ ಸಿಬ್ಬಂದಿ ವಜಾ ಪ್ರಕ್ರಿಯೆ ನಡೆಯಲಿದೆ ಎಂದು ಘೋಷಿಸಿದ್ದಾರೆ.

ಎನ್ ಡಿಟಿವಿಯ ವರದಿಯ ಪ್ರಕಾರ, ಟ್ವಿಟರ್ ಇಂಡಿಯಾದ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗಗಳಲ್ಲಿನ ಎಲ್ಲಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.

ವಿಶ್ವದ ಶ್ರೀಮಂತ ಉದ್ಯಮಿ ಮಸ್ಕ್ ಕಳೆದ ವಾರ ಟ್ವಿಟರ್‌ನಲ್ಲಿ ಸಿಇಒ ಪರಾಗ್ ಅಗರವಾಲ್ ಮತ್ತು ಸಿಎಫ್‌ಒ ಮತ್ತು ಇತರ ಕೆಲವು ಉನ್ನತ ಕಾರ್ಯನಿರ್ವಾಹಕರ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ತಮ್ಮ ಇನ್ನಿಂಗ್ಸ್ ಆರಂಭಿಸಿದ್ದರು.

"ಕಂಪನಿಯಲ್ಲಿ ಲೇ-ಆಫ್ ಪ್ರಾರಂಭವಾಗಿದೆ. ನನ್ನ ಕೆಲವು ಸಹೋದ್ಯೋಗಿಗಳು ಈ ಬಗ್ಗೆ ಇಮೇಲ್ ಮೂಲಕ ಸೂಚನೆ ಪಡೆದಿದ್ದಾರೆ" ಎಂದು ಹೆಸರು ಹೇಳಲು ಇಚ್ಚಿಸದ ಟ್ವಿಟರ್ ಇಂಡಿಯಾ ಉದ್ಯೋಗಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

SCROLL FOR NEXT