ವಾಣಿಜ್ಯ

ಟ್ವಿಟರ್ ಹಾದಿಯಲ್ಲಿ ಫೇಸ್ ಬುಕ್; ಬೃಹತ್ ಪ್ರಮಾಣದ ಉದ್ಯೋಗ ಕಡಿತಕ್ಕೆ ಮುಂದು?

Srinivas Rao BV

ನ್ಯೂಯಾರ್ಕ್: ಟ್ವಿಟರ್ ನಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಿದ ಬೆನ್ನಲ್ಲೆ ಮತ್ತೊಂದು ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಮಾತೃಸಂಸ್ಥೆ ಮೆಟಾ ಸಹ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಮುಖ ಟೆಕ್ನಾಲಜಿ ವಿಭಾಗದಲ್ಲಿ ಬೃಹತ್ ಪ್ರಮಾಣದ ಉದ್ಯೋಗ ಕಡಿತ ಈ ವಾರ ಘೋಷಣೆಯಾಗಬಹುದು ಎಂದು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.

ವಾಲ್ ಸ್ಟ್ರೀಟ್ ಜರ್ನಲ್ ಈ ಬಗ್ಗೆ ವರದಿ ಪ್ರಕಟಿಸಿದ್ದು, 87,000ಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಮೆಟಾ ಹಲವು ಸಾವಿರ ನೌಕರರನ್ನು ಉದ್ಯೋಗದಿಂದ ತೆಗೆದುಹಾಕಲಿದೆ ಎಂದು ಅಂದಾಜಿಸಿದೆ. 

ಸಂಸ್ಥೆಯ ಅಧಿಕಾರಿಗಳು ಉದ್ಯೋಗಿಗಳಿಗೆ ಅಗತ್ಯವಿಲ್ಲದ ಪ್ರಯಾಣವನ್ನು ಈ ವಾರದ ಪ್ರಾರಂಭದಲ್ಲಿ ರದ್ದುಗೊಳಿಸುವಂತೆ ಸೂಚಿಸಿದ್ದಾರೆ ಎಂದು ಹೆಳಲಾಗಿದೆ.

ಸಂಸ್ಥೆಯ 18 ವರ್ಷಗಳ ಇತಿಹಾಸದಲ್ಲಿ ಈ ಬಾರಿ ಅತಿ ಹೆಚ್ಚು ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕುವ ಸಾಧ್ಯತೆ ಇದ್ದು, ಇದಕ್ಕೆ ಪೂರಕವೆಂಬಂತೆ ಮಾರ್ಕ್ ಜುಕರ್ಬರ್ಗ್ ಸಹ ಸಂಸ್ಥೆ ಸಣ್ಣ ಪ್ರಮಾಣದ ಹೆಚ್ಚಿನ ಆದ್ಯತೆಯ ಬೆಳವಣಿಗೆ ಪ್ರದೇಶಗಳೆಡೆಗೆ ಹೆಚ್ಚು ಗಮನ ಹರಿಸಲಿದೆ ಎಂದು ಹೇಳಿದ್ದರು.

SCROLL FOR NEXT