ಬೆಂಗಳೂರು: 2022ರ ಆರ್ಥಿಕ ವರ್ಷದಲ್ಲಿ ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 31.8 ಕೋಟಿ ರೂಪಾಯಿಗಳ ನಿವ್ವಳ ನಷ್ಟ ಅನುಭವಿಸಿದೆ.
ಆದರೆ ಇದರ ಕಾರ್ಯಾಚರಣೆಯ ಆದಾಯವು ಹಿಂದಿನ ಹಣಕಾಸಿನ 86 ಕೋಟಿಗೆ ಹೋಲಿಸಿದರೆ, FY2021-2022ರಲ್ಲಿ 157 ಕೋಟಿ ರೂಪಾಯಿ ಗಳಿಸಿದ್ದು ಸುಮಾರು ಎರಡು ಪಟ್ಟು ಹೆಚ್ಚಾಗಿದೆ.
ಬಿಸಿನೆಸ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್, ಟೋಫ್ಲರ್ ಹಣಕಾಸಿನ ಮಾಹಿತಿಯ ಪ್ರಕಾರ, ಕಂಪನಿಯು ಕಳೆದ ಆರ್ಥಿಕ ವರ್ಷದಲ್ಲಿ 7.8 ಕೋಟಿ ನಿವ್ವಳ ಲಾಭಗಳಿಸಿತ್ತು. ಆದರೆ, ಈ ವರ್ಷದಲ್ಲಿ 31.8 ಕೋಟಿ ನಿವ್ವಳ ನಷ್ಟ ಅನುಭವಿಸಿದೆ.
ಇದನ್ನೂ ಓದಿ: ಭಾರತದ ಮೊದಲ ಟ್ವಿಟ್ಟರ್ ಬಳಕೆದಾರ ಯಾರು? ಎಲೋನ್ ಮಸ್ಕ್, ಬ್ಲೂ ಟಿಕ್ ಗೆ ಶುಲ್ಕ ವಿಧಿಸುವ ಬಗ್ಗೆ ಅವರೇನಂತಾರೆ?
FY22 ರಲ್ಲಿ ಕಂಪನಿಯ ಉದ್ಯೋಗಿ ಪ್ರಯೋಜನಗಳ ವೆಚ್ಚವು ಹಿಂದಿನ ಹಣಕಾಸು ವರ್ಷದಲ್ಲಿ 43 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ 137 ಕೋಟಿ ರೂಪಾಯಿಗಳಿಗೆ ಏರಿದೆ. ಇದರ ನಿವ್ವಳ ಮೌಲ್ಯವು FY22 ರಲ್ಲಿ ಹೆಚ್ಚಾಗಿದೆ. ಏಕೆಂದರೆ ಇದು ಹಿಂದಿನ ಹಣಕಾಸು ವರ್ಷದಲ್ಲಿ 32 ಕೋಟಿ ರೂ.ಗೆ ಹೋಲಿಸಿದರೆ 45 ಕೋಟಿ ರೂಪಾಯಿ ಹೆಚ್ಚಳವಾಗಿದೆ.
ಮುಂಬರುವ ವರ್ಷಗಳಲ್ಲಿ ಕಂಪನಿಯ ಅಭಿವೃದ್ಧಿಯ ಬಗ್ಗೆ ಮಂಡಳಿಯು ಆಶಾವಾದಿಯಾಗಿದೆ. ಭಾರತದಲ್ಲಿ 180 ಉದ್ಯೋಗಿಗಳು ಸೇರಿದಂತೆ ವಿಶ್ವದಾದ್ಯಂತ ಸುಮಾರು 3,500 ಉದ್ಯೋಗಿಗಳನ್ನು ಟ್ವಿಟರ್ ವಜಾಗೊಳಿಸಿದೆ.