ವಾಣಿಜ್ಯ

25 ಸಾವಿರ ಮೊಬೈಲ್ ಟವರ್ ಸ್ಥಾಪಿಸಲು ಕೇಂದ್ರದಿಂದ 26, 000 ಕೋಟಿ ರೂ. ಬಿಡುಗಡೆ

Nagaraja AB

ನವದೆಹಲಿ: 500 ದಿನಗಳಲ್ಲಿ 25,000 ಮೊಬೈಲ್ ಟವರ್ ಸ್ಥಾಪಿಸಲು ರೂ. 26,000 ಕೋಟಿ ಹಣ ನೀಡಲು ಕೇಂದ್ರ ಸರ್ಕಾರ ಮಂಗಳವಾರ ಅನುಮೋದನೆ ನೀಡಿದೆ. ಸಾರ್ವತ್ರಿಕ ಸೇವಾ ಬಾಧ್ಯತೆ ನಿಧಿಯಡಿ ಈ ಯೋಜನೆಗೆ ಆರ್ಥಿಕ ನೆರವು ನೀಡಲಾಗುತ್ತಿದ್ದು, ಭಾರತ್ ಬ್ರ್ಯಾಂಡ್ ನೆಟ್ ವರ್ಕ್ ನಿಂದ ಯೋಜನೆ ಅನುಷ್ಟಾನವಾಗಲಿದೆ.

ಇತ್ತೀಚಿಗೆ ಮುಕ್ತಾಯಗೊಂಡ ರಾಜ್ಯ ಐಟಿ ಸಚಿವರ ಮೂರು ದಿನಗಳ ಡಿಜಿಟಲ್ ಇಂಡಿಯಾ ಸಮಾವೇಶದಲ್ಲಿ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಈ ಈ ಯೋಜನೆಯನ್ನು ಘೋಷಿಸಿದ್ದರು. ಡಿಜಿಟಲ್ ಇಂಡಿಯಾ ಮತ್ತು ಅದು ದೇಶದಲ್ಲಿ ಎಲ್ಲ ಭಾಗಕ್ಕೂ ತಲುಪುವಲ್ಲಿ ಸಂಪರ್ಕ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ ವೈಷ್ಣವ್, ಮುಂದಿನ 500 ದಿನಗಳಲ್ಲಿ ಹೊಸದಾಗಿ 25,000 ಟವರ್ ಸ್ಥಾಪಿಸಲು ರೂ. 26,000 ಕೋಟಿ ನೀಡಲಾಗುವುದು ಎಂದು ಘೋಷಿಸಿದ್ದರು.

ಬಂಡವಾಳ ವೆಚ್ಚವಾಗಿ ರೂ. 2,000 ಕೋಟಿಯನ್ನು ರಾಜ್ಯಗಳಿಗೆ ವಿಶೇಷ ನೆರವಾಗಿ ನೀಡುವುದಾಗಿ ಅವರು ತಿಳಿಸಿದರು. ಡಿಜಿಟಲ್ ಇಂಡಿಯಾವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ  ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಮೊಬೈಲ್ ಇಂಡಿಯಾ ಕಾಂಗ್ರೆಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ 5 ಜಿ ತಂತ್ರಜ್ಞಾನಕ್ಕೆ ಚಾಲನೆ ನೀಡಿದ್ದಾರೆ. ಇದರಿಂದ ದೇಶದಲ್ಲಿ ಹೈಸ್ಪೀಡ್ ಇಂಟರ್ ನೆಟ್ ಸಂಪರ್ಕತೆ ಹೆಚ್ಚಾಗಿದೆ. 

SCROLL FOR NEXT