ಭಾರತದ ಸೇವಾ ವಲಯ (ಸಂಗ್ರಹ ಚಿತ್ರ) 
ವಾಣಿಜ್ಯ

ಭಾರತದ ಸೇವಾ ವಲಯದ ಚಟುವಟಿಕೆ 6 ತಿಂಗಳಲ್ಲೇ ಅತ್ಯಧಿಕ ಕುಸಿತ!

ಭಾರತದ ಸೇವಾ ವಲಯದ ಚಟುವಟಿಕೆಗಳು 6 ತಿಂಗಳಲ್ಲೇ ಅತ್ಯಧಿಕ ಕುಸಿತ ಕಂಡಿದೆ. 

ನವದೆಹಲಿ: ಭಾರತದ ಸೇವಾ ವಲಯದ ಚಟುವಟಿಕೆಗಳು 6 ತಿಂಗಳಲ್ಲೇ ಅತ್ಯಧಿಕ ಕುಸಿತ ಕಂಡಿದೆ. ಇದು ಸೆಪ್ಟೆಂಬರ್ ತಿಂಗಳ ಕುಸಿತವಾಗಿದ್ದು, ಮಾರ್ಚ್ ನಿಂದ ಸಣ್ಣ ಉದ್ಯಮಗಳ ಆದಾಯ ಅತ್ಯಂತ ಕಡಿಮೆ ದರದಲ್ಲಿ ಏರಿಕೆ ಕಂಡಿದೆ ಎಂದು ಮಾಸಿಕ ಸಮೀಕ್ಷೆ ಮೂಲಕ ತಿಳಿದುಬಂದಿದೆ. 

ಸೆಪ್ಟೆಂಬರ್ ತಿಂಗಳಲ್ಲಿ ಪಿಎಂಐ ಉದ್ಯಮ ಚಟುವಟಿಕೆ ಸೂಚ್ಯಂಕ ಶೇ.54.3 ಕ್ಕೆ ಕುಸಿದಿದ್ದು, ಆಗಸ್ಟ್ ತಿಂಗಳಲ್ಲಿ ಇದು ಶೇ.57.2 ರಷ್ಟಿತ್ತು. ಮಾರ್ಚ್ ನಿಂದ ಇದೇ ಮೊದಲ ಬಾರಿಗೆ ಸೂಚ್ಯಂಕ ಇಷ್ಟು ಕಡಿಮೆ ಪ್ರಮಾಣಕ್ಕೆ ಕುಸಿತ ಕಂಡಿದೆ. 

ಸತತ 14 ನೇ ತಿಂಗಳಲ್ಲಿ ಸೇವಾ ವಲಯ ಉತ್ಪತ್ತಿಯಲ್ಲಿ ವಿಸ್ತರಣೆ ದಾಖಲಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತದ ಸೇವಾ ವಲಯ ಹಲವು ಸಮಸ್ಯೆಗಳನ್ನು ಎದುರಿಸಿ ನಿಂತಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಬೆಳವಣಿಗೆಯ ವೇಗದಲ್ಲಿ ನಷ್ಟ ತೋರಿಸುತ್ತಿದ್ದರೂ ಬಲವಾದ ಕ್ಷಮತೆಯನ್ನು ಹೊಂದಿದೆ ಎಂದು ಎಸ್&ಪಿ ಗ್ಲೋಬಲ್ ಮಾರ್ಕೆಟ್ ಇಂಟಲಿಜೆನ್ಸ್ ನ ಆರ್ಥಿಕತೆಯ ವಿಭಾಗದ ಪೊಲಿಯಾನಾ ಡಿ ಲಿಮಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಮುದ್ರದಲ್ಲೇ ಬಿಗ್ ಡೀಲ್‌: ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ನೌಕೆ ಭಾರತಕ್ಕೆ ಯು-ಟರ್ನ್!

Iran-Israel war- ಇರಾನ್‌ನ ತೈಲ ಘಟಕ ಮೇಲೆ ಇಸ್ರೇಲ್ ದಾಳಿ, ಪ್ರತೀಕಾರವಾಗಿ ಗಲ್ಫ್ ರಾಷ್ಟ್ರಗಳ ಇಂಧನ ಸೌಲಭ್ಯಗಳ ಮೇಲೆ ಟೆಹ್ರಾನ್ ಪ್ರತೀಕಾರ

ಇರಾನ್ ಬಗ್ಗೆ ಜಗತ್ತಿಗೆ ಸುಳ್ಳು ಹೇಳಿತಾ ಅಮೆರಿಕ?: ಖಮೇನಿ ಇರಾನ್ ಅಣ್ವಸ್ತ್ರ ಅಭಿವೃದ್ಧಿ ತಡೆಯುತ್ತಿದ್ದರು: US ಮಾಜಿ ಅಧಿಕಾರಿ ಜೋ ಕೆಂಟ್ ಸ್ಫೋಟಕ ಹೇಳಿಕೆ!

ಇರಾನ್ ಮತ್ತೊಮ್ಮೆ ಕತಾರ್ ಮೇಲೆ ದಾಳಿ ಮಾಡಿದರೆ, ಸೌತ್ ಪಾರ್ಸ್ ಅನಿಲ ಸ್ಥಾವರ ಮೇಲೆ ಯುದ್ಧ ಖಂಡಿತ: Donald Trump

ಉಪಚುನಾವಣೆ: ಯುಗಾದಿ ಹಬ್ಬದ ದಿನವೇ ಬಾಗಲಕೋಟೆ, ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿಗಳ ಘೋಷಣೆ

SCROLL FOR NEXT