ವಾಣಿಜ್ಯ

ಗೂಗಲ್ ಇಂಡಿಯಾ ನೀತಿ ಮುಖ್ಯಸ್ಥೆ ಅರ್ಚನಾ ಗುಲಾಟಿ ರಾಜೀನಾಮೆ

Lingaraj Badiger

ನವದೆಹಲಿ: ಐದು ತಿಂಗಳ ಹಿಂದಷ್ಟೇ ಸರ್ಕಾರಿ ಸೇವೆ ತೊರೆದು ಟೆಕ್ ದೈತ್ಯ ಸಂಸ್ಥೆಗೆ ಸೇರಿದ್ದ ಗೂಗಲ್ ಇಂಡಿಯಾದ ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ ಮುಖ್ಯಸ್ಥೆ ಅರ್ಚನಾ ಗುಲಾಟಿ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅರ್ಥಶಾಸ್ತ್ರ ಪದವೀಧರೆಯಾಗಿರುವ ಮತ್ತು ಐಐಟಿ-ದೆಹಲಿಯಿಂದ ಪಿಎಚ್‌ಡಿ ಪಡೆದಿರುವ ಗುಲಾಟಿ ಅವರು ಗೂಗಲ್ ಇಂಡಿಯಾಗೆ ಸೇರುವ ಮೊದಲು ನೀತಿ ಆಯೋಗದ ಜಂಟಿ ಕಾರ್ಯದರ್ಶಿ(ಡಿಜಿಟಲ್ ಕಮ್ಯುನಿಕೇಷನ್ಸ್) ಆಗಿದ್ದರು.

ಗುಲಾಟಿ ಅವರು ಗೂಗಲ್ ಇಂಡಿಯಾಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಲಾಟಿ ಮತ್ತು ಗೂಗಲ್ ಅನ್ನು ಸಂಪರ್ಕಿಸಿದಾಗ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಆದರೆ ಅವರು ಏಕೆ ರಾಜೀನಾಮೆ ನೀಡಿದರು ಎಂಬುದು ಇನ್ನೂ ತಿಳಿದು ಬಂದಿಲ್ಲ.

ಗೂಗಲ್ ಭಾರತದಲ್ಲಿ ಸರಣಿ ಆ್ಯಂಟಿ-ಟ್ರಸ್ಟ್ ಪ್ರಕರಣಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಮತ್ತು ಕಠಿಣ ನಿಯಂತ್ರಣಗಳನ್ನು ಎದುರಿಸುತ್ತಿರುವ ಸಮಯದಲ್ಲೇ ಗುಲಾಟಿ ರಾಜೀನಾಮೆ ನೀಡಿದ್ದಾರೆ.

SCROLL FOR NEXT