ವಾಣಿಜ್ಯ

ಭಾರತದ ಶೇ.90 ರಷ್ಟು ಪ್ರದೇಶ ಡೇಂಜರ್ ಜೋನ್; ದೇಶದ ಆರ್ಥಿಕತೆಗೆ ಮುಳುವಾಗುತ್ತಿದೆ ತಾಪಮಾನದ ತೀವ್ರತೆ

Srinivas Rao BV

ನವದೆಹಲಿ: ಭಾರತದಲ್ಲಿ ಬೇಸಿಗೆ ತೀವ್ರಗೊಳ್ಳುತ್ತಿದ್ದು, ದೇಶದ ಶೇ.90 ರಷ್ಟು ಭಾಗ ಉಷ್ಣಹವೆ ಅಪಾಯದಲ್ಲಿದ್ದು, ಅವುಗಳನ್ನು ಡೇಂಜರ್ ಜೋನ್ ಗಳನ್ನಾಗಿ ಗುರುತಿಸಲಾಗಿದೆ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.

ರಮಿತ್ ದೇಬನಾಥ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಹೋದ್ಯೋಗಿಗಳಿಂದ ನಡೆದ ಅಧ್ಯಯನ ವರದಿಯ ಪ್ರಕಾರ ತೀವ್ರವಾದ ಉಷ್ಣಹವೆ ಪರಿಣಾಮಗಳನ್ನು ಎದುರಿಸುವಲ್ಲಿ ದೆಹಲಿ ಹೆಚ್ಚಾಗಿ ದುರ್ಬಲವಾಗಿದೆ ಎಂದು ತಿಳಿದುಬಂದಿದೆ.

ಇದಷ್ಟೇ ಅಲ್ಲದೇ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಭಾರತದ ಯತ್ನದ ಮೇಲೆ ತಾಪಮಾನ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ವರದಿ ಹೇಳಿದೆ. ಪ್ರಸ್ತುತ ಮೌಲ್ಯಮಾಪನ ಮೆಟ್ರಿಕ್‌ಗಳು ದೇಶದ ಮೇಲೆ ಉಷ್ಣಹವೆಯ ಪರಿಣಾಮವನ್ನು ಸಂಪೂರ್ಣವಾಗಿ ವಿಶ್ಲೇಷಿಸಲು ಸಾಧ್ಯವಾಗದೇ ಇರಬಹುದು ಎಂದೂ ವರದಿ ಹೇಳಿದೆ.

ತಾಪಮಾನದ ತೀವ್ರತೆ ಹೆಚ್ಚುತ್ತಿರುವುದು, ಅಂತಿಮವಾಗಿ ಹೊರಗೆ ಕೆಲಸ ಮಾಡುವ ಸಾಮರ್ಥ್ಯವನ್ನು ಶೇ.15 ರಷ್ಟು ಕುಗ್ಗಿಸುತ್ತದೆ, ಸುಮಾರು 480 ಮಿಲಿಯನ್ ಜನರ ಜೀವನದ ಗುಣಮಟ್ಟವನ್ನು ಕಡಿಮೆ ಮಾಡಿ 2050 ರ ವೇಳೆಗೆ ಜಿಡಿಪಿಯ ಶೇ.2.8 ರಷ್ಟು ಕುಸಿತವಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

1992 ರಿಂದ ಉಷ್ಣಹವೆಯ ಕಾರಣದಿಂದ 24,000 ಮಂದಿ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ತಾಪಮಾನದ ತೀವ್ರತೆಗೆ 14 ಮಂದಿ ಸಾವನ್ನಪ್ಪಿದ್ದರು ಎಂದು ವರದಿ ಉಲ್ಲೇಖಿಸಿದೆ. 

SCROLL FOR NEXT