ರಾಫೆಲ್ ನಡಾಲ್ (ಸಂಗ್ರಹ ಚಿತ್ರ) 
ವಾಣಿಜ್ಯ

ಇನ್ಫೋಸಿಸ್ ಬ್ರಾಂಡ್ ಅಂಬಾಸಿಡರ್ ಆಗಿ ರಾಫೆಲ್ ನಡಾಲ್ ನೇಮಕ

ದೇಶದ ಎರಡನೇ ಅತಿ ದೊಡ್ಡ ಐಟಿ ಸೇವಾ ರಫ್ತು ಕಂಪನಿ ಇನ್ಫೋಸಿಸ್ ಗುರುವಾರ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಅವರನ್ನು ತನ್ನ ಬ್ರಾಂಡ್ ಮತ್ತು ಇನ್ಫೋಸಿಸ್ನ ಡಿಜಿಟಲ್ ಇನ್ನೋವೇಶನ್‌ನ ರಾಯಭಾರಿಯಾಗಿ ನೇಮಕ ಮಾಡಿದೆ. 

ಬೆಂಗಳೂರು: ದೇಶದ ಎರಡನೇ ಅತಿ ದೊಡ್ಡ ಐಟಿ ಸೇವಾ ರಫ್ತು ಕಂಪನಿ ಇನ್ಫೋಸಿಸ್ ಗುರುವಾರ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಅವರನ್ನು ತನ್ನ ಬ್ರಾಂಡ್ ಮತ್ತು ಇನ್ಫೋಸಿಸ್ನ ಡಿಜಿಟಲ್ ಇನ್ನೋವೇಶನ್‌ನ ರಾಯಭಾರಿಯಾಗಿ ನೇಮಕ ಮಾಡಿದೆ. 

ರಾಫೆಲ್ ನಡಾಲ್ ಅವರೊಂದಿಗೆ ಮೂರು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಂಡಿದೆ. ಡಿಜಿಟಲ್ ಸೇವೆಗಳ ಕಂಪನಿಯೊಂದಿಗೆ ನಡಾಲ್ ಅವರ ಈ ಮೊದಲ ಸಹಯೋಗವನ್ನು ಗುರುತಿಸಲು, ಇನ್ಫೋಸಿಸ್ ಮತ್ತು ನಡಾಲ್ ಅವರ ಕೋಚಿಂಗ್ ತಂಡ AI- ಚಾಲಿತ ಪಂದ್ಯ ವಿಶ್ಲೇಷಣಾ ಸಾಧನ ಅಭಿವೃದ್ಧಿಪಡಿಸುತ್ತಿದೆ ಎಂದು ಕಂಪನಿಯ ಬೆಂಗಳೂರಿನ ಪ್ರಧಾನ ಕಚೇರಿಯ ಪ್ರಕಟಣೆ ತಿಳಿಸಿದೆ.

ಇನ್ಫೋಸಿಸ್‌ನೊಂದಿಗೆ ನಿಕಟವಾಗಿ ಕೆಲಸ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ, ಏಕೆಂದರೆ ಅವರು ಟೆನ್ನಿಸ್ ಅನುಭವವನ್ನು ವಿಕಸನಗೊಳಿಸಲು ಮಾತ್ರವಲ್ಲದೆ ಟೆನಿಸ್ ಲೋಕದ ಜನ, ಉಜ್ವಲ ಭವಿಷ್ಯದ ಭಾಗವಾಗಲು ಸಶಕ್ತಗೊಳಿಸುತ್ತಾರೆ. ಇನ್ಫೋಸಿಸ್ ತನ್ನ ಡಿಜಿಟಲ್ ಪರಿಣತಿಯನ್ನು ಜಾಗತಿಕ ಟೆನಿಸ್ ಪರಿಸರ ವ್ಯವಸ್ಥೆಗೆ ತಂದ ರೀತಿಯನ್ನು ನಾನು ಇಷ್ಟಪಡುತ್ತೇನೆ ಎಂದು ರಾಫೆಲ್ ನಡಾಲ್ ಹೇಳಿದ್ದಾರೆ.

ವಿಶ್ವದ ಅತ್ಯಂತ ಗೌರವಾನ್ವಿತ ಚಾಂಪಿಯನ್ ಅಥ್ಲೀಟ್‌ಗಳಲ್ಲಿ ಒಬ್ಬರಾದ ನಡಾಲ್ ಅವರನ್ನು ಇನ್ಫೋಸಿಸ್‌ನ ರಾಯಭಾರಿಯಾಗಿ ಸ್ವಾಗತಿಸಲು ಇದು ಗೌರವವಾಗಿದೆ ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ