ಸಾಂದರ್ಭಿಕ ಚಿತ್ರ 
ವಾಣಿಜ್ಯ

ಷೇರು ಸಂವೇದಿ ಸೂಚ್ಯಂಕ ದಾಖಲೆಯ ಏರಿಕೆ: 70,000 ಗಡಿ ದಾಟಿದ ಸೆನ್ಸೆಕ್ಸ್

ಷೇರು ಮಾರುಕಟ್ಟೆ ವಹಿವಾಟಿನ ವಾರದ ಆರಂಭ ದಿನವಾದ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಗರಿಷ್ಠ ಏರಿಕೆ ಕಂಡಿದೆ.

ಮುಂಬೈ: ಷೇರು ಮಾರುಕಟ್ಟೆ ವಹಿವಾಟಿನ ವಾರದ ಆರಂಭ ದಿನವಾದ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಗರಿಷ್ಠ ಏರಿಕೆ ಕಂಡಿದೆ. ಮೊದಲ ಬಾರಿಗೆ 70,000 ಗಡಿಯನ್ನು ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ(BSE) ದಾಟಿದೆ. ಮತ್ತು ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ  ಕೂಡ ಶರವೇಗದಲ್ಲಿ ಏರಿಕೆಯಾಗಿದ್ದು 21 ಸಾವಿರ ಅಂಕವನ್ನು ದಾಟಿದೆ. 

ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಸಕ್ತ ಹಣಕಾಸು ವರ್ಷದ ಬೆಳವಣಿಗೆಯನ್ನು ಕಂಡ ನಂತರ ಮತ್ತು ನೀತಿ ದರಗಳನ್ನು ಯಥಾಸ್ಥಿತಿಯಲ್ಲಿಟ್ಟ ನಂತರ ಪ್ರಮುಖ ಸೂಚ್ಯಂಕಗಳು ಕಳೆದ ಶುಕ್ರವಾರ ವಾರಾಂತ್ಯದಲ್ಲಿಯೇ ಗರಿಷ್ಠ ಮಟ್ಟವನ್ನು ತಲುಪಿದ್ದವು.

30-ಷೇರುಗಳ ಸೆನ್ಸೆಕ್ಸ್ ತನ್ನ ಸಾರ್ವಕಾಲಿಕ ಗರಿಷ್ಠವಾದ 70,048.90 ಪಾಯಿಂಟ್‌ಗಳನ್ನು ಇಂದು ಬೆಳಗ್ಗೆ ವಹಿವಾಟು ಆರಂಭವಾದ ಕೆಲವೇ ನಿಮಿಷಗಳಲ್ಲಿ ತಲುಪಿತು. ನಂತರ ಸ್ವಲ್ಪಮಟ್ಟಿಗೆ 69,958.13 ಪಾಯಿಂಟ್‌ಗಳಿಗೆ ತನ್ನ ಲಾಭವನ್ನು ಕಳೆದುಕೊಂಡಿತು, ಇದು ಶುಕ್ರವಾರದ ಮುಕ್ತಾಯದ ಮಟ್ಟಕ್ಕೆ ಹೋಲಿಸಿದರೆ 132.53 ಪಾಯಿಂಟ್ ಅಥವಾ ಶೇಕಡಾ 0.19 ರಷ್ಟು ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!