ನಕಲಿ ನೋಟು ಪ್ರಕರಣ 
ವಾಣಿಜ್ಯ

ನೋಟ್ ಬ್ಯಾನ್ ಬಳಿಕ ನಗದು ಚಲಾವಣೆ ಶೇ.83ರಷ್ಟು ಏರಿಕೆ!

ನೋಟು ರದ್ದತಿ ಅಥವಾ ಡಿಮಾನೆಟೈಸೇಷನ್ ಬಳಿಕ ಸಾರ್ವಜನಿಕರಲ್ಲಿರುವ ನಗದು ಮೌಲ್ಯ ದುಪ್ಪಟ್ಟಾಗಿದ್ದು, ನಗದು ಚಲಾವಣೆ ಶೇ.83ರಷ್ಟು ಏರಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳು ಮಾಹಿತಿ ನೀಡಿವೆ.

ನವದೆಹಲಿ: ನೋಟು ರದ್ದತಿ ಅಥವಾ ಡಿಮಾನೆಟೈಸೇಷನ್ ಬಳಿಕ ಸಾರ್ವಜನಿಕರಲ್ಲಿರುವ ನಗದು ಮೌಲ್ಯ ದುಪ್ಪಟ್ಟಾಗಿದ್ದು, ನಗದು ಚಲಾವಣೆ ಶೇ.83ರಷ್ಟು ಏರಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳು ಮಾಹಿತಿ ನೀಡಿವೆ.

ಚಲಾವಣೆಯಲ್ಲಿದ್ದ ಶೇ.86 ರಷ್ಟು ಕರೆನ್ಸಿಯನ್ನು ರದ್ದುಗೊಳಿಸಿದ ಆರು ವರ್ಷಗಳ ಬಳಿಕ ಸಾರ್ವಜನಿಕರಲ್ಲಿರುವ ನಗದು ಮೌಲ್ಯ ದುಪ್ಪಟ್ಟಾಗಿದೆ. ಮಾಧ್ಯಮಗಳಿಗೆ ದೊರೆತ ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳ ಪ್ರಕಾರ, 2022ರ ಡಿಸೆಂಬರ್ 23ರಂದು ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿಯ ಮೌಲ್ಯ (ಅಥವಾ ಸಾರ್ವಜನಿಕರ ಬಳಿಯಿರುವ ನಗದು) 32.42 ಲಕ್ಷ ಕೋಟಿ ರೂ ಎಂದು ತಿಳಿದುಬಂದಿದೆ. 

ಕಪ್ಪುಹಣ ತಡೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಹಳೆಯ 1,000 ಮತ್ತು 500 ರೂ ನೋಟುಗಳನ್ನು ನ.4, 2016 ರಂದು ನಿಷೇಧಿಸಲಾಗಿತ್ತು. ಅಂದು 17.74 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. ನೋಟು ನಿಷೇಧದ ಬಳಿಕ ಚಲಾವಣೆಯಲ್ಲಿರುವ ನಗದು ಮೌಲ್ಯ 9 ಲಕ್ಷ ಕೋಟಿಯಷ್ಟು ಕುಸಿದಿತ್ತು. 2017 ರ ಜನವರಿಗೆ ಹೋಲಿಸಿದರೆ, ಚಲಾವಣೆಯಲ್ಲಿರುವ ನಗದು 3 ಪಟ್ಟು ಏರಿಕೆ ಅಥವಾ ಶೇ 260ರಷ್ಟು ಜಿಗಿತ ಕಂಡಿದೆ. ನ.4, 2016 ರಿಂದ ಪರಿಗಣಿಸಿದರೆ ಸುಮಾರು 83 ಪ್ರತಿಶತ ಏರಿಕೆಯಾಗಿದೆ  ಎಂದು ಹೇಳಲಾಗಿದೆ

ನ.8, 2016 ರಂದು ಚಲಾವಣೆಯಲ್ಲಿದ್ದ ಒಟ್ಟು 15.4 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳಲ್ಲಿ 15.3 ಲಕ್ಷ ಕೋಟಿ ರೂ ಮೌಲ್ಯದ ಅಥವಾ ಶೇ 99.3 ರಷ್ಟು ನೋಟುಗಳನ್ನು ಸಾರ್ವಜನಿಕರು ಹಿಂದಿರುಗಿಸಿದ್ದರು. ನಿಷೇಧಿತ ಕರೆನ್ಸಿ ನೋಟುಗಳ ಬದಲಿಗೆ ಹೊಸ 500 ಮತ್ತು 2,000 ರೂ ನೋಟುಗಳು ಚಲಾವಣೆಗೆ ಬಂದಿವೆ. ಆದರೆ, 1,000 ರೂ ನೋಟು ಮರು ಚಲಾವಣೆಗೆ ಬಂದಿಲ್ಲ.

ರಿಮೊನೆಟೈಸೇಶನ್ ವೇಗವನ್ನು ಹೆಚ್ಚಿಸಿದಂತೆ, CIC ವಾರದಿಂದ ವಾರಕ್ಕೆ ಏರಿತು ಮತ್ತು ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಗರಿಷ್ಠ ಶೇಕಡಾ 74.3 ತಲುಪಿತು. ನಂತರ ಜೂನ್ 2017 ರ ಅಂತ್ಯದ ವೇಳೆಗೆ ಅದರ ಪೂರ್ವ ನೋಟು ಅಮಾನ್ಯೀಕರಣದ ಗರಿಷ್ಠ 85 ಪ್ರತಿಶತದಷ್ಟಿತ್ತು ಎಂದು ಹೇಳಲಾಗಿದೆ. ನೋಟುಗಳನ್ನು ಅಮಾನ್ಯ ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಕಟಿಸಿದ್ದು,  ನೋಟು ಅಮಾನ್ಯಗೊಳಿಸಿದ ಸರ್ಕಾರದ ನಿರ್ಧಾರವನ್ನು 4:1ರ  ಬಹುಮತದ ತೀರ್ಪಿನೊಂದಿಗೆ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT