ವಾಣಿಜ್ಯ

ಶೇ.76 ರಷ್ಟು 2,000 ರೂ. ನೋಟುಗಳು ಬ್ಯಾಂಕ್‌ಗಳಿಗೆ ಮರಳಿವೆ: ಆರ್‌ಬಿಐ

Lingaraj Badiger

ನವದೆಹಲಿ: ಚಲಾವಣೆಯಲ್ಲಿರುವ 2,000 ರೂ. ನೋಟುಗಳಲ್ಲಿ ಶೇ.76 ರಷ್ಟು ನೋಟುಗಳು ಠೇವಣಿಗಳ ಮೂಲಕ ಬ್ಯಾಂಕುಗಳಿಗೆ ಮರಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಸೋಮವಾರ ತಿಳಿಸಿದೆ.

ಮೇ 19 ರಂದು ಆರ್‌ಬಿಐ ಚಲಾವಣೆಯಲ್ಲಿರುವ 2,000 ರೂ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿತು ಮತ್ತು 2000 ರೂ. ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30 ರವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಿದೆ.

"ಬ್ಯಾಂಕ್‌ಗಳಿಂದ ಪಡೆದ ಮಾಹಿತಿಯ ಪ್ರಕಾರ, ಜೂನ್ 30, 2023 ರವರೆಗೆ ಒಟ್ಟು 2.72 ಲಕ್ಷ ಕೋಟಿ ರೂ. ಮೌಲ್ಯದ 2 ಸಾವಿರ ರೂಪಾಯಿ ನೋಟುಗಳು ವಾಪಸ್ ಬ್ಯಾಂಕ್ ಗಳಿಗೆ ಬಂದಿವೆ.

ಮೇ 19, 2023 ನಂತರ ಚಲಾವಣೆಯಿಂದ ಹಿಂಪಡೆದ ರೂ 2,000 ಬ್ಯಾಂಕ್ ನೋಟುಗಳಲ್ಲಿ ಶೇ. 76 ರಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿವೆ.

SCROLL FOR NEXT