ವಾಣಿಜ್ಯ

ಇಂಡಿಗೋದಿಂದ ದಾಖಲೆಯ 500 ಏರ್ ಬಸ್ A320s ಖರೀದಿ!

Srinivas Rao BV

ನವದೆಹಲಿ: ಇಂಡಿಗೋ ವಿಮಾನ ಸಂಸ್ಥೆ ಹೊಸದಾಗಿ 500 ಏರ್ ಬಸ್ A320s ಗಳ ಖರೀದಿಗೆ ಆರ್ಡರ್ ನೀಡಿದೆ. ಇದು ಪ್ರಯಾಣಿಕ ವಿಮಾನಯಾನ ಕ್ಷೇತ್ರದಲ್ಲಿ ದಾಖಲೆಯ ಪ್ರಮಾಣದ ಖರೀದಿಯಾಗಿದೆ. 

ಇಂಡಿಗೋ ಭಾರತದ ಅತ್ಯಂತ ಅಗ್ಗದ ದರದಲ್ಲಿ ಸೇವೆಗಳನ್ನು ಒದಗಿಸುತ್ತಿರುವ ವಿಮಾನಯಾನ ಸಂಸ್ಥೆಯಾಗಿದ್ದು, ಪ್ಯಾರೀಸ್ ಏರ್ ಶೋ ನಲ್ಲಿ ಯುರೋಪಿಯನ್ ಉತ್ಪಾದಕ ಸಂಸ್ಥೆಯಿಂದ ಹೊಸ ಏರ್ ಬಸ್ ಗಳನ್ನು ಖರೀದಿಸುತ್ತಿದೆ.

55 ಡಾಲರ್ ಬಿಲಿಯನ್ ಮೌಲ್ಯದ ಒಪ್ಪಂದ ಇದಾಗಿದ್ದು, ಇದು ಪ್ರಯಾಣಿಕ ವಿಮಾನಯಾನ ಕ್ಷೇತ್ರದಲ್ಲೆ ಐತಿಹಾಸಿಕ ಆರ್ಡರ್ ಆಗಿದೆ ಎಂದು ಇಂಡಿಗೋ ಮುಖ್ಯಸ್ಥ ಪೀಟರ್ ಎಲ್ಬರ್ಸ್ ಹೇಳಿದ್ದಾರೆ.  

2030 ರಿಂದ 2035 ರ ವೇಳೆಗೆ ವಿಮಾನಗಳನ್ನು ಇಂಡಿಗೋ ಸಂಸ್ಥೆಗೆ ಪೂರೈಕೆ ಮಾಡಲಾಗುತ್ತದೆ. ಜೂ.19 ರ ಒಪ್ಪಂದ "ಅಗಾಧವಾದ ಮೈಲಿಗಲ್ಲಾಗಿದ್ದು, ನಮಗೆ ಅರಿವಿರುವಂತೆ ಈ ಹಿಂದೆ ಯಾರೂ ಈ ಪ್ರಮಾಣದ ಆರ್ಡರ್ ಮಾಡಿಲ್ಲ" ಎಂದು ಏರ್‌ಬಸ್ ಮುಖ್ಯಸ್ಥ ಗುಯಿಲೌಮ್ ಫೌರಿ ಹೇಳಿದ್ದಾರೆ.

1,300 ವಿಮಾನಗಳ ಖರೀದಿಯ ಆರ್ಡರ್ ನೀಡುವ ಮೂಲಕ ಇಂಡಿಗೋ ಏರ್ ಬಸ್ A320 ಸಂಸ್ಥೆಯ ಅತಿ ದೊಡ್ಡ ಗ್ರಾಹಕನಾಗಿಯೂ ಹೊರಹೊಮ್ಮಿದೆ. ಫೆಬ್ರವರಿ 2022 ರಲ್ಲಿ ಏರ್ ಇಂಡಿಯಾ ಏಕಕಾಲಕ್ಕೆ 470 ವಿಮಾನಗಳನ್ನು ಆರ್ಡರ್ ಮಾಡುವ ಮೂಲಕ ದಾಖಲೆಯ ಪ್ರಮಾಣದಲ್ಲಿ ಅತಿ ಹೆಚ್ಚು ವಿಮಾನ ಖರೀದಿಗೆ ಆರ್ಡರ್ ಮಾಡಿದ್ದ ಸಂಸ್ಥೆ ಎಂಬ ದಾಖಲೆ ನಿರ್ಮಿಸಿತ್ತು. 

SCROLL FOR NEXT