ಹಣದುಬ್ಬರದಿಂದ ವೈಯಕ್ತಿಕ ಖರ್ಚುಗಳು ಇಳಿಮುಖ: ಖಾಸಗಿ ಹೂಡಿಕೆಗಳ ಮೇಲೆ ಪರಿಣಾಮ
ಹಣದುಬ್ಬರದಿಂದ ವೈಯಕ್ತಿಕ ಖರ್ಚುಗಳು ಇಳಿಮುಖವಾಗುತ್ತಿದ್ದು, ಅದು ಖಾಸಗಿ ಹೂಡಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರ್ ಬಿಐ ಪ್ರಕಟಿಸಿರುವ ಪತ್ರದ ಮೂಲಕ ತಿಳಿದುಬಂದಿದೆ.
ಮುಂಬೈ: ಹಣದುಬ್ಬರದಿಂದ ವೈಯಕ್ತಿಕ ಖರ್ಚುಗಳು ಇಳಿಮುಖವಾಗುತ್ತಿದ್ದು, ಅದು ಖಾಸಗಿ ಹೂಡಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರ್ ಬಿಐ ಪ್ರಕಟಿಸಿರುವ ಪತ್ರದ ಮೂಲಕ ತಿಳಿದುಬಂದಿದೆ.
ಆರ್ ಬಿಐ ಉಪಗೌರ್ನರ್ ಮೈಕೆಲ್ ದೇಬಬ್ರತಾ ಪತ್ರ ನೇತೃತ್ವದ ತಂಡ ಈ ಲೇಖನವನ್ನು ಪ್ರಕಟಿಸಿದ್ದು, ಗ್ರಾಹಕ ಖರ್ಚುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಣದುಬ್ಬರವನ್ನು ಕಡಿಮೆ ಮಾಡುವ ಅಗತ್ಯತೆಯನ್ನು ಉಪಗೌರ್ನರ್ ಮೈಕೆಲ್ ದೇಬಬ್ರತಾ ಹೇಳಿದ್ದಾರೆ.
ಆರ್ ಬಿಐ ನ ಹಣಕಾಸು ನೀತಿ ಕ್ರಮಗಳು ಮತ್ತು ಸರ್ಕಾರದ ಕ್ರಮಗಳ ಪರಿಣಾಮವಾಗಿ 2022-23ರ ಅವಧಿಯಲ್ಲಿ ಶೇ.5 ಕ್ಕಿಂತ ಹೆಚ್ಚಿರುವ ಗ್ರಾಹಕ ಬೆಲೆ ಸೂಚ್ಯಂಕ ಸಿಪಿಐ ಆಧಾರಿತ ಚಿಲ್ಲರೆ ಹಣದುಬ್ಬರ ಈಗ ಇಳಿಮುಖವಾಗಿದೆ. ಮೇ ತಿಂಗಳಲ್ಲಿ ಎರಡು ವರ್ಷಗಳ ಕನಿಷ್ಠ 4.25 ಶೇ. ಕುಸಿದಿತ್ತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.