ಪ್ರಧಾನಿ ನರೇಂದ್ರ ಮೋದಿ 
ವಾಣಿಜ್ಯ

ಹೆಚ್ಚು ಬಂಡವಾಳ ಹೂಡಿಕೆ ಮಾಡುವಂತೆ ಭಾರತೀಯ ಕಂಪನಿಗಳಿಗೆ ಪ್ರಧಾನಿ ಮೋದಿ ಒತ್ತಾಯ

2023-24ರ ಬಜೆಟ್‌ನಲ್ಲಿ ನೀಡಿರುವ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವಂತೆ ಮತ್ತು ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವಂತೆ ಭಾರತೀಯ ಕಂಪನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಒತ್ತಾಯಿಸಿದ್ದಾರೆ.

ನವದೆಹಲಿ: 2023-24ರ ಬಜೆಟ್‌ನಲ್ಲಿ ನೀಡಿರುವ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವಂತೆ ಮತ್ತು ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವಂತೆ ಭಾರತೀಯ ಕಂಪನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಒತ್ತಾಯಿಸಿದ್ದಾರೆ.

ಬಜೆಟ್ ಕುರಿತ 10 ನೇ ವೆಬ್‌ನಾರ್ ಉದ್ದೇಶಿಸಿ ಮಾತನಾಡಿದ ಮೋದಿ, ಸರ್ಕಾರವು ಬಂಡವಾಳ ವೆಚ್ಚದ ಮೇಲಿನ ವೆಚ್ಚವನ್ನು 10 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆ, ಇದು ಇದುವರೆಗಿನ ಅತ್ಯಧಿಕವಾಗಿದೆ ಎಂದರು. ಈ ಹಿನ್ನಲೆಯಲ್ಲಿ ದೇಶದ ಖಾಸಗಿ ವಲಯದವರೂ ಸಹ ತಮ್ಮ ಹೂಡಿಕೆಯನ್ನು ಸರ್ಕಾರದಂತೆ ಹೆಚ್ಚಿಸುವಂತೆ ಕರೆ ನೀಡುತ್ತೇನೆ, ಇದರಿಂದ ದೇಶವು ಗರಿಷ್ಠ ಲಾಭವನ್ನು ಪಡೆಯುತ್ತದೆ ಎಂದು ಅವರು ಹೇಳಿದರು.

ಜಿಎಸ್‌ಟಿ, ಆದಾಯ ತೆರಿಗೆ ಕಡಿತ ಮತ್ತು ಕಾರ್ಪೊರೇಟ್ ತೆರಿಗೆಯಿಂದಾಗಿ ಭಾರತದಲ್ಲಿ ತೆರಿಗೆ ಹೊರೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಉತ್ತಮ ತೆರಿಗೆ ಸಂಗ್ರಹವಾಗಿದೆ. 2013-14 ರಲ್ಲಿ ಸುಮಾರು 11 ಲಕ್ಷ ಕೋಟಿ ರೂ. ಗಳಷ್ಟಿದ್ದ ಒಟ್ಟು ತೆರಿಗೆ ಆದಾಯ, 2023-24 ರಲ್ಲಿ 33 ಲಕ್ಷ ಕೋಟಿಗೆ ಏರಿದ್ದು,  ಶೇಕಡಾ 200 ರಷ್ಟು ಹೆಚ್ಚಾಗಿದೆ. 2013-14 ರಿಂದ 2020-21 ರವರೆಗೆ ವೈಯಕ್ತಿಕ ತೆರಿಗೆ ರಿಟರ್ನ್‌ಗಳ ಸಂಖ್ಯೆ 3.5 ಕೋಟಿಯಿಂದ 6.5 ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿದರು.

ರುಪೇ ಮತ್ತು ಯುಪಿಐ ಕೇವಲ ಕಡಿಮೆ-ವೆಚ್ಚದ ಮತ್ತು ಹೆಚ್ಚು ಸುರಕ್ಷಿತ ತಂತ್ರಜ್ಞಾನವಲ್ಲ, ಆದರೆ ಇದು ಜಗತ್ತಿನಲ್ಲಿ ನಮ್ಮ ಗುರುತಾಗಿದೆ. ನಾವೀನ್ಯತೆಗೆ ಅಪಾರ ಅವಕಾಶವಿದೆ ಮತ್ತು ಯುಪಿಐ ನ್ನು ಇಡೀ ವಿಶ್ವದಲ್ಲಿ ಬಲವರ್ಧನೆಗೊಳಿಸಬೇಕು, ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಹಣಕಾಸು ಸಂಸ್ಥೆಗಳು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಲು ಫಿನ್‌ಟೆಕ್‌ಗಳೊಂದಿಗೆ ಗರಿಷ್ಠ ಪಾಲುದಾರಿಕೆಯನ್ನು ಹೊಂದಿರಬೇಕು ಎಂದು ಮೋದಿ ಸಲಹೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT