ವಾಣಿಜ್ಯ

ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ: ಗ್ರಾಂಗೆ 6 ಸಾವಿರ ಗಡಿ ದಾಟಿದ ಹಳದಿ ಲೋಹ

Sumana Upadhyaya

ಮುಂಬೈ: ಬ್ಯಾಂಕಿಂಗ್ ಬಿಕ್ಕಟ್ಟಿನ ಅಲೆ ಜಾಗತಿಕ ಮಾರುಕಟ್ಟೆಯನ್ನು ಅಲುಗಾಡಿಸುತ್ತಿದ್ದು, ಹಳದಿ ಲೋಹ ಚಿನ್ನದ ಬೆಲೆ ನಿನ್ನೆ ಸೋಮವಾರ ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದೆ, ಇದೇ ಮೊದಲ ಬಾರಿಗೆ 60 ಸಾವಿರ ರೂಪಾಯಿಗೆ ತಲುಪಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್-MCX ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ 60,359 ರೂ.ಗೆ ಏರಿಕೆಯಾಗಿದೆ. 

ನಿನ್ನೆ ಸೋಮವಾರ 1.8% ರಷ್ಟು ಲಾಭವನ್ನು ದಾಖಲಿಸಿದೆ. ಅಮೆರಿಕದಲ್ಲಿನ ಬ್ಯಾಂಕ್‌ಗಳ ವಹಿವಾಟು ಕುಸಿತದ ನಂತರ ಮತ್ತೊಂದು ಜಾಗತಿಕ ಬ್ಯಾಂಕಿಂಗ್ ಬಿಕ್ಕಟ್ಟು ಮತ್ತು ಕ್ರೆಡಿಟ್ ಸ್ಯೂಸ್‌ಗಾಗಿ 3.25 ಡಾಲರ್ ಬಿಲಿಯನ್ ಪಾರುಗಾಣಿಕಾ ಒಪ್ಪಂದದ ನಂತರ ಹೂಡಿಕೆದಾರರು ಚಿನ್ನವನ್ನು ಖರೀದಿಸಲು ಧಾವಿಸುತ್ತಿದ್ದಾರೆ ಎಂದು WSJ ಹೊಸ ಅಧ್ಯಯನದಲ್ಲಿ ವರದಿ ಮಾಡಿದೆ.

ಈ ವರ್ಷದ ಆರಂಭದಿಂದ ಚಿನ್ನದ ಬೆಲೆಯು ಗ್ರಾಂಗೆ ಶೇಕಡಾ 8ರಷ್ಟುೇ ಏರಿಕೆಯಾಗಿದೆ, ಜಾಗತಿಕ ಮಟ್ಟದಲ್ಲಿ ಆರ್ಥಿಕ ಬೆಳವಣಿಗೆಗಳು ಇದಕ್ಕೆ ಕಾರಣವಾಗುತ್ತದೆ. ದುರ್ಬಲ ಜಾಗತಿಕ ಬೆಳವಣಿಗೆಯ ಕಳವಳ ಮತ್ತು ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ಈ ವರ್ಷ ಚಿನ್ನದ ಬೆಲೆಯಲ್ಲಿನ ಏರಿಕೆಯು 10 ಗ್ರಾಂಗೆ 64,000 ರೂಪಾಯಿಗೆ ಏರುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ನಿರೀಕ್ಷಿಸುತ್ತಿದ್ದಾರೆ.

SCROLL FOR NEXT