ಭಾರತೀಯ ರೈಲ್ವೆ 
ವಾಣಿಜ್ಯ

ನೈರುತ್ಯ ರೈಲ್ವೆ ವಲಯದ ಆದಾಯ ಹೆಚ್ಚಳ: ಹೊಸ ದಾಖಲೆ!

ನೈರುತ್ಯ ರೈಲ್ವೆ ವಲಯವು ಈ ಆರ್ಥಿಕ ವರ್ಷದಲ್ಲಿ ಮಾರ್ಚ್‌ 22ರ ಅಂತ್ಯದವರೆಗೆ ಅತಿಹೆಚ್ಚು ಅಂದರೆ ಒಟ್ಟು ರೂ.7,771 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷ ಈ ಅವಧಿಗೆ ರೂ.6,133 ಕೋಟಿ (2021-22) ಆದಾಯ ಸಂಗ್ರಹವಾಗಿತ್ತು. 

ನೈರುತ್ಯ ರೈಲ್ವೆ ವಲಯವು ಈ ಆರ್ಥಿಕ ವರ್ಷದಲ್ಲಿ ಮಾರ್ಚ್‌ 22ರ ಅಂತ್ಯದವರೆಗೆ ಅತಿಹೆಚ್ಚು ಅಂದರೆ ಒಟ್ಟು ರೂ.7,771 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷ ಈ ಅವಧಿಗೆ ರೂ.6,133 ಕೋಟಿ (2021-22) ಆದಾಯ ಸಂಗ್ರಹವಾಗಿತ್ತು. 

ಪ್ರಯಾಣಿಕರ ಆದಾಯ 2019-20ರಲ್ಲಿ ರೂ.2,124 ಕೋಟಿ ಗಳಿಸಿದ್ದು, ಮಾರ್ಚ್ 22, 2023 ರವರೆಗೆ ರೂ.2,686 ಕೋಟಿ ಆದಾಯ ಗಳಿಸುವ ಮೂಲಕ ರೂ.562 ಕೋಟಿ 11.10ರಷ್ಟು ಹೆಚ್ಚು ಗಳಿಕೆ ಮಾಡಿ ಹೊಸ ದಾಖಲೆ ಮಾಡಲಾಗಿದೆ. 

2021-22 ರಲ್ಲಿ ನೈರುತ್ಯ ರೈಲ್ವೆಯ ಸರಕು ಸಾಗಣೆ ಆದಾಯದಲ್ಲಿ ರೂ.4,189 ಕೋಟಿ ಆದಾಯ ಗಳಿಸಿತ್ತು. ಮಾರ್ಚ್ 22, 2023 ರವರೆಗಿನ ಈ ಹಣಕಾಸು ವರ್ಷದಲ್ಲಿ ರೂ.4,514 ಕೋಟಿ ಗಳಿಸುವ ಮೂಲಕ ಶೇ. 7.75 ರಷ್ಟು ಹೆಚ್ಚಾಗಿದೆ. 2021-22ರ ಅವಧಿಯಲ್ಲಿ ರೂ.168 ಕೋಟಿ ಇದ್ದ ಆದಾಯ ಈ ವರ್ಷ ರೂ.306 ಕೋಟಿ ಆದಾಯವನ್ನು ಗಳಿಸುವ ಮೂಲಕ ಹೊಸ ದಾಖಲೆ ಮಾಡಲಾಗಿದೆ.

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್, ಈ ಸಾಧನೆಗೆ ಸಹಕರಿಸಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಅಭಿನಂದಿಸಿದ್ದಾರೆ. ಜೊತೆಗೆ ರೈಲ್ವೆಯ ಗ್ರಾಹಕರಿಗೂ ಕೂಡಾ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!