2000 ರೂಪಾಯಿ ನೋಟು 
ವಾಣಿಜ್ಯ

12 ಸಾವಿರ ಕೋಟಿ ರೂ ಮೌಲ್ಯದ 2000 ರೂ ಮುಖಬೆಲೆ ನೋಟುಗಳು ವಾಪಸ್ ಬಂದಿಲ್ಲ: ಆರ್ ಬಿಐ 

2000 ರೂಪಾಯಿ ಮುಖಬೆಲೆಯ 12 ಸಾವಿರ ಕೋಟಿ ರೂಪಾಯಿ ಮೌಲ್ಯದ ನೋಟುಗಳು ರಿಸರ್ವ್ ಬ್ಯಾಂಕ್ ಗೆ ವಾಪಸ್ ಬರಬೇಕಿವೆ ಎಂದು ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ನವದೆಹಲಿ: 2000 ರೂಪಾಯಿ ಮುಖಬೆಲೆಯ 12 ಸಾವಿರ ಕೋಟಿ ರೂಪಾಯಿ ಮೌಲ್ಯದ ನೋಟುಗಳು ರಿಸರ್ವ್ ಬ್ಯಾಂಕ್ ಗೆ ವಾಪಸ್ ಬರಬೇಕಿವೆ ಎಂದು ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಈ ವರೆಗೂ ಶೇ.87 ರಷ್ಟು 2,000 ರೂ ಮುಖಬೆಲೆಯ ನೋಟುಗಳು ವಾಪಸ್ ಕೇಂದ್ರೀಯ ಬ್ಯಾಂಕ್ ಗೆ ವಾಪಸ್ ಬಂದಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದು ಉಳಿದ ಪ್ರಮಾಣದ ನೋಟುಗಳನ್ನು ಬೇರೆಡೆ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿತ್ತಿಯ ನೀತಿ ಪ್ರಕಟಿಸಿ ಮಾತನಾಡಿದ ಗೌರ್ನರ್ ಶಕ್ತಿಕಾಂತ್ ದಾಸ್, ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ಪೈಕಿ  3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳು ವಾಪಸ್ಸಾಗಿದ್ದು 12,000 ಕೋಟಿ ಮೌಲ್ಯದಷ್ಟು ನೋಟುಗಳು ವಾಪಸ್ಸಾಗಬೇಕಿವೆ. ಇದು ಮೇ.19,2023 ವರೆಗಿನ ಅಂಕಿ-ಅಂಶವಾಗಿದೆ ಎಂದು ಹೇಳಿದ್ದಾರೆ. 2,000 ರೂಪಾಯಿ ಮುಖಬೆಲೆಯ ನೋಟುಗಳ ವಾಪಸಾತಿಗೆ ಕೇಂದ್ರೀಯ ಬ್ಯಾಂಕ್ ಅವಧಿಯನ್ನು ಒಂದು ವಾರದವರೆಗೆ ವಿಸ್ತರಿಸಿದೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

India to Israel: ಪ್ರಧಾನಿ ಮೋದಿ ಪಯಣಿಸಿದ್ದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

ಮಲ್ಲಿಕಾರ್ಜುನ ಮುತ್ಯಾಗೆ ಮತ್ತೆ ಸಂಕಷ್ಟ: ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು

SCROLL FOR NEXT