ಉಡಾನ್ (ಸಂಗ್ರಹ ಚಿತ್ರ) 
ವಾಣಿಜ್ಯ

500 ಮಾರ್ಗಗಳ ಮೈಲಿಗಲ್ಲು ಸಾಧಿಸಿದ ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್

2017 ರಲ್ಲಿ ಆರಂಭವಾದ ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್, 500 ಮಾರ್ಗಗಳ ಮೈಲಿಗಲ್ಲನ್ನು ಸಾಧಿಸಿದೆ. 

ನವದೆಹಲಿ: 2017 ರಲ್ಲಿ ಆರಂಭವಾದ ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್, 500 ಮಾರ್ಗಗಳ ಮೈಲಿಗಲ್ಲನ್ನು ಸಾಧಿಸಿದೆ. ಸಾಮಾನ್ಯ ಜನರೂ ವಿಮಾನ ಪ್ರಯಾಣ ಮಾಡಲು ನೆರವಾಗುವ ಯೋಜನೆ ಉಡಾನ್ (ಉಡೇ ದೇಶ್ ಕಾ ಅಮ್ ನಾಗರಿಕ್) ನ್ನು ಪರಿಚಯಿಸಲಾಗಿತ್ತು.

ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿನ ಡೇಟಾ ಪ್ರಕಾರ, ಅ.03, 2023 ವರೆಗೆ ಒಟ್ಟು 493 ಮಾರ್ಗಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿತ್ತು. ದಕ್ಷಿಣ ಭಾರತದಲ್ಲಿ 5 ನೇ ಹಂತದಲ್ಲಿ ಇತ್ತೀಚೆಗೆ ಸೇರ್ಪಡೆಯಾದ ವಿಮಾನ ಮಾರ್ಗಗಳ ಮೂಲಕ ಈ ಮೈಲಿಗಲ್ಲು 500 ಕ್ಕೆ ದಾಟಿದೆ ಎಂದು ಮೂಲಗಳು ತಿಳಿಸಿವೆ.

3 ನೇ ಹಂತದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಂದರೆ 165 ಮಾರ್ಗಗಳಿಗೆ ವಿಮಾನವನ್ನು ಪರಿಚಯಿಸಲಾಗಿದ್ದು, ಈ ನಂತರದ ಸ್ಥಾನದಲ್ಲಿ 152 ಮಾರ್ಗಗಳೊಂದಿಗೆ 2ನೇ ಹಂತ ಇದೆ. 

ಈ ವರ್ಷದ ಆರಂಭದಲ್ಲಿ 5 ನೇ ಸುತ್ತಿನ ಸಂಪರ್ಕ ಯೋಜನೆಯನ್ನು ಪ್ರಾರಂಭಿಸುವಾಗ, ಪ್ರಯಾಣಿಕ  ವಿಮಾನಯಾನ ಸಚಿವ ಜೆ.ಸಿಂಧಿಯಾ, ಯೋಜನೆಯ ಈ ಹೊಸ ಮತ್ತು ಬಲವಾದ ಆವೃತ್ತಿ, ಯೋಜನೆಗೆ ವೇಗವನ್ನು ಹೆಚ್ಚಿಸುತ್ತದೆ. ಮುಂದಿನ ದಿನಗಳಲ್ಲಿ 1,000 ಮಾರ್ಗಗಳು ಮತ್ತು 50 ಹೆಚ್ಚುವರಿ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು ಮತ್ತು ವಾಟರ್ ಏರೋಡ್ರೋಮ್‌ಗಳನ್ನು ಕಾರ್ಯಗತಗೊಳಿಸುವ ಗುರಿಯನ್ನು ತಲುಪಲು ನೆರವಾಗುತ್ತದೆ ಎಂದು ಹೇಳಿದ್ದರು.
 
ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 27, 2017 ರಂದು ದೆಹಲಿ ಮತ್ತು ಶಿಮ್ಲಾ ನಡುವೆ ಮತ್ತು ಕಡಪ-ಹೈದರಾಬಾದ್-ನಾಂದೇಡ್ ನಡುವೆ ಪ್ರಾದೇಶಿಕ ವಿಮಾನಗಳಿಗೆ ಚಾಲನೆ ನೀಡುವ ಮೂಲಕ ಯೋಜನೆಯನ್ನು ಪ್ರಾರಂಭಿಸಿದ್ದರು. ಕೈಗೆಟುಕುವ ಬೆಲೆಯಲ್ಲಿ ವಿಮಾನ ಸೇವೆಯ ಮೂಲಕ ಸಣ್ಣ ಮತ್ತು ಮಧ್ಯಮ ನಗರಗಳನ್ನು ದೊಡ್ಡ ನಗರಗಳೊಂದಿಗೆ ಸಂಪರ್ಕಿಸಲು ಯೋಜನೆಯನ್ನು ಪ್ರಾರಂಭಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT