ಸಾಂದರ್ಭಿಕ ಚಿತ್ರ 
ವಾಣಿಜ್ಯ

ಕಚೇರಿಗೆ ಬಂದು ಕೆಲಸ ಮಾಡಿದರೆ ರಿವಾರ್ಡ್; ಬಡ್ತಿ, ವೇತನ ಹೆಚ್ಚಳಕ್ಕೆ ಅನುಕೂಲವಾಗುತ್ತಂತೆ: ಸಿಇಒಗಳ ಅಂಬೋಣ!

ದೇಶದಲ್ಲಿ ಸುಮಾರು ಶೇಕಡಾ 89ರಷ್ಟು ಸಿಇಒಗಳು ಮತ್ತು ಜಾಗತಿಕ ಮಟ್ಟದಲ್ಲಿ ಶೇಕಡಾ 87ರಷ್ಟು ಸಿಇಒಗಳು ಕಚೇರಿಗೆ ಹೋಗಿ ಕೆಲಸ ಮಾಡಿದರೆ ರಿವಾರ್ಡ್ ಗಳು, ಬಡ್ತಿಗಳು, ವೇತನ ಹೆಚ್ಚಳಕ್ಕೆ ಅನುಕೂಲವಾಗುತ್ತದೆ ಎಂದು ಭಾವಿಸುತ್ತಾರೆ.

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬಹುತೇಕ ಐಟಿ ಕಂಪೆನಿಗಳು, ಸ್ಟಾರ್ಟ್ ಅಪ್ ಗಳು, ಎಂಎನ್ ಸಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಆಯ್ಕೆಯನ್ನು ನೀಡಿದ್ದವು. ಕೊರೋನಾ ಸಂಕಷ್ಟದಿಂದ ನಾವೆಲ್ಲ ಪಾರು ಆದ ನಂತರ ವಾರಕ್ಕೆ ಮೂರು ದಿನ ಉದ್ಯೋಗಿಗಳು ಕೆಲಸಕ್ಕೆ ಬರುವಂತೆ ನಿಯಮ ಜಾರಿ ಮಾಡಲು ಬಹುತೇಕ ಕಂಪೆನಿಗಳು ಯಶಸ್ವಿಯಾಗಿದ್ದರೂ, ಕಂಪೆನಿಗಳಲ್ಲಿ ಮುಖ್ಯ ಕಾರ್ಯನಿರ್ವಾಹಕರು(Chief executives) ಕಚೇರಿಗೆ ಕೆಲಸಕ್ಕೆ ಹೋಗುವುದು ಬೇಕೇ ಬೇಡವೆ ಅಥವಾ ಮನೆಯಿಂದಲೇ ಕೆಲಸ ಮಾಡುವುದೇ ಎಂಬ ಸಂದಿಗ್ಧತೆಯಲ್ಲಿ ಇದ್ದಾರೆ.

ದೇಶದಲ್ಲಿ ಸುಮಾರು ಶೇಕಡಾ 89ರಷ್ಟು ಸಿಇಒಗಳು ಮತ್ತು ಜಾಗತಿಕ ಮಟ್ಟದಲ್ಲಿ ಶೇಕಡಾ 87ರಷ್ಟು ಸಿಇಒಗಳು ಕಚೇರಿಗೆ ಹೋಗಿ ಕೆಲಸ ಮಾಡಿದರೆ ರಿವಾರ್ಡ್ ಗಳು, ಬಡ್ತಿಗಳು, ವೇತನ ಹೆಚ್ಚಳಕ್ಕೆ ಅನುಕೂಲವಾಗುತ್ತದೆ ಎಂದು ಭಾವಿಸುತ್ತಾರೆ. ಕೆಪಿಎಂಜಿ 2023 ಇಂಡಿಯಾ ಸಿಇಒ ಔಟ್‌ಲುಕ್ ಪ್ರಕಾರ, ಭಾರತದಲ್ಲಿ ಶೇಕಡಾ 54ರಷ್ಟು ಸಿಇಒಗಳು ಜಾಗತಿಕವಾಗಿ ಶೇಕಡಾ 64ರಷ್ಟು ಉದ್ಯೋಗಿಗಳಿಗೆ ಮೂರು ವರ್ಷಗಳಲ್ಲಿ ಕಚೇರಿಯಲ್ಲಿ ಕೆಲಸದ ವಾತಾವರಣ ಕಲ್ಪಿಸಿದ್ದಾರೆ.

ಉದ್ಯೋಗಿಗಳ ಕೆಲಸದ ಗುಣಮಟ್ಟ ಪ್ರತಿಪಾದನೆಗಳನ್ನು ಒಳಗೊಂಡಿರುವ ದೀರ್ಘಾವಧಿಯ ದೃಷ್ಟಿಕೋನವನ್ನು ನಾಯಕರು ಹೊಂದಿರಬೇಕು ಮತ್ತು ಪ್ರತಿಭೆಯನ್ನು ಪೋಷಿಸಲು ಮತ್ತು ನಿರ್ವಹಿಸಲು ಸಂಸ್ಥೆಗಳು ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡುವ ಯೋಜನೆಗಳನ್ನು ಹೊರತರುವುದನ್ನು ಮುಂದುವರಿಸುವುದರಿಂದ ಉದ್ಯೋಗಿಗಳ ಕಾಳಜಿ ಮತ್ತು ಅಗತ್ಯಗಳನ್ನು ಪರಿಗಣಿಸಬೇಕು ಎಂದು ವರದಿ ಹೇಳಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ತನ್ನ ಉದ್ಯೋಗಿಗಳಿಗೆ ವಾರದಲ್ಲಿ ಐದು ದಿನಗಳ ಕಾಲ ಕಚೇರಿಯಿಂದಲೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇನ್ಫೋಸಿಸ್ ತನ್ನ ಇತ್ತೀಚಿನ ಗಳಿಕೆಯ ಸಮ್ಮೇಳನದಲ್ಲಿ ಉದ್ಯೋಗಿಗಳ ಕೆಲಸದ ವಿಧಾನದಲ್ಲಿ ಮುಕ್ತವಾಗಿರುವುದಾಗಿ ಹೇಳಿಕೊಂಡಿದೆ. 

"ಪ್ರತಿ ಮೂರು ತಿಂಗಳಿಗೊಮ್ಮೆ ಪ್ರತಿ ವಾರ, ಕ್ಯಾಂಪಸ್ ನಲ್ಲಿ ಹೆಚ್ಚು ಹೆಚ್ಚು ಉದ್ಯೋಗಿಗಳು ಬರುತ್ತಾರೆ. ಮುಂದಿನ ದಿನಗಳಲ್ಲಿ ಕಚೇರಿಗೆ ಬಂದು ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಬಹುದು ಎಂದು ನಾವು ಆಶಿಸಿದ್ದೇವೆ ಎಂದು ಇನ್ಫೋಸಿಸ್‌ನ ಸಿಇಒ ಮತ್ತು ಎಂಡಿ ಸಲೀಲ್ ಪರೇಖ್ ಹೇಳಿದ್ದಾರೆ.

ಸಾಮಾನ್ಯವಾಗಿ, ನಮ್ಮ ದೃಷ್ಟಿಕೋನವು ಉದ್ಯೋಗಿಗಳಿಗೆ ಸಡಿಲತೆ ನೀಡುವುದಕ್ಕೆ ನಾವು ಬೆಂಬಲ ನೀಡುತ್ತೇವೆ. ಇಲ್ಲಿ ವರ್ಕ್ ಫ್ರಂ ಹೋಂ ವಾತಾವರಣವನ್ನು ಹೇಗೆ ಕಲ್ಪಿಸಿದ್ದೇವೆ ಎಂಬುದು ಕೂಡ ಮುಖ್ಯವಾಗುತ್ತದೆ. ಈ ಹಂತದಲ್ಲಿ ನಾವು ಇದನ್ನು ಮುಂದುವರಿಸುತ್ತೇವೆ ಎಂದರು. 

ಮಾನವ ಸಂಪನ್ಮೂಲ ತಜ್ಞರು ಹೇಳುವ ಪ್ರಕಾರ ಶಾಶ್ವತವಾಗಿ ಕಂಪೆನಿಗಳು ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡುವ ಮತ್ತು ವರ್ಕ್ ಫ್ರಂ ಹೋಂ ಆಯ್ಕೆಯನ್ನು ನೀಡಿದರೆ ಅದು ಕಂಪೆನಿಗಳ ಕೆಲಸದ ದಕ್ಷತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಅಭಿಪ್ರಾಯ ಪಡುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT