ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಭಾರತದ ಬಾಹ್ಯ ಸಾಲ 629 ಬಿಲಿಯನ್ ಡಾಲರ್ ಗೆ ಏರಿಕೆ

ಭಾರತದ ಬಾಹ್ಯ ಸಾಲ 2023 ರ ಜೂನ್ ಅಂತ್ಯದ ವರೆಗೂ 629.1 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.

ಭಾರತದ ಬಾಹ್ಯ ಸಾಲ
Srinivas Rao BV
Updated On : 29 Sept 2023, 8:02 pm

ಮುಂಬೈ: ಭಾರತದ ಬಾಹ್ಯ ಸಾಲ 2023 ರ ಜೂನ್ ಅಂತ್ಯದ ವರೆಗೂ 629.1 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಆದರೆ ಸಾಲ-ಜಿಡಿಪಿ ಅನುಪಾತ ಕುಸಿತಗೊಂಡಿದೆ ಎಂದು ಆರ್ ಬಿಐ ಗುರುವಾರ ಬಿಡುಗಡೆ ಮಾಡಿರುವ ಮಾಹಿತಿಯಿಂದ ತಿಳಿದುಬಂದಿದೆ.

ಮಾರ್ಚ್ ಅಂತ್ಯದ ವೇಳೆಗೆ 624.3 ಬಿಲಿಯನ್ ಡಾಲರ್ ಇದ್ದ ಸಾಲ 4.7 ಬಿಲಿಯನ್ ನಷ್ಟು ಏರಿಕೆಯಾಗಿದೆ. ಮಾ.2023 ರ ಅಂತ್ಯದಲ್ಲಿ ಶೇ.18.8 ರಷ್ಟಿದ್ದ ಬಾಹ್ಯ ಸಾಲದಿಂದ ಜಿಡಿಪಿ ಅನುಪಾತ 18.6 ಕ್ಕೆ ಕುಸಿತ ಕಂಡಿದೆ.

ಪ್ರಮುಖ ಕರೆನ್ಸಿಗಳಾದ ಯೆನ್ ಮತ್ತು ಎಸ್‌ಡಿಆರ್‌ಗೆ ಹೋಲಿಸಿದರೆ US ಡಾಲರ್‌ನ ಮೌಲ್ಯವರ್ಧನೆಯ ಪರಿಣಾಮವು $3.1 ಶತಕೋಟಿಯಷ್ಟಿದೆ.

Advertisement

Advertisement

ಅಮೇರಿಕಾ ಡಾಲರ್ ಮೌಲ್ಯದ ಸಾಲವು ಭಾರತದ ಬಾಹ್ಯ ಸಾಲದ ಅತಿದೊಡ್ಡ ಅಂಶವಾಗಿ ಉಳಿದಿದೆ, ಜೂನ್ 2023 ರ ಅಂತ್ಯದ ವೇಳೆಗೆ 54.4 ಶೇಕಡಾ ಪಾಲನ್ನು ಹೊಂದಿದೆ, ನಂತರದ ಸ್ಥಾನದಲ್ಲಿ ಭಾರತೀಯ ರೂಪಾಯಿ (30.4 ಶೇಕಡಾ), SDR (5.9 ಶೇಕಡಾ), ಯೆನ್ ( 5.7 ಶೇಕಡಾ), ಮತ್ತು ಯೂರೋ (3.0 ಶೇಕಡಾ) ಗಳಲ್ಲಿ ಭಾರತದ ಸಾಲ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments