ಚಿನ್ನ-ಬೆಳ್ಳಿ ದರ
ಚಿನ್ನ-ಬೆಳ್ಳಿ ದರ 
ವಾಣಿಜ್ಯ

Gold rate today: ಗಗನದತ್ತ ಮುಖ ಮಾಡಿದ್ದ ಚಿನ್ನದರ ಇಂದು ಸ್ಥಿರ!

Srinivasamurthy VN

ಮುಂಬೈ: ಯುಗಾದಿ ಹಬ್ಬದ ಬಳಿಕ ಗಗನದತ್ತ ಮುಖ ಮಾಡಿದ್ದ ಚಿನ್ನದ ಬೆಲೆ ಇಂದು ಯಾವುದೇ ಏರಿಕೆ ಇಲ್ಲದೆ ಸ್ಥಿರವಾಗಿದೆ.

ಹೌದು.. ಮಹಿಳೆಯರ ನೆಚ್ಚಿನ ಹಳದಿ ಲೋಹ ಚಿನ್ನದ ದರದಲ್ಲಿ ಭಾನುವಾರ ಯಾವುದೇ ಏರಿಕೆಯಿಲ್ಲದೇ ಸ್ಥಿರವಾಗಿದೆ. ಈ ಹಿಂದೆ 10 ಗ್ರಾಂ ಚಿನ್ನದ ದರ 73 ಸಾವಿರ ರೂ ಗಡಿ ದಾಟಿತ್ತು. ಇಂದು ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗುವ ಅಂದಾಜಿತ್ತು. ಆದರೆ, ಕಳೆದ ಭಾನುವಾರ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಆದರೆ ಸೋಮವಾರದಿಂದ ಹಳದಿ ಲೋಹದ ಬೆಲೆಯಲ್ಲಿ ಕ್ರಮೇಣ ಏರಿಕೆ ಕಂಡು ಬಂದಿತ್ತು. ಆದರೆ ಇಂದು ಅಂದರೆ ಭಾನುವಾರ ಚಿನ್ನದ ದರದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ.

ಇಂದು ಚಿನ್ನದ ದರ ಸ್ಥಿರವಾಗಿದ್ದು, 22 ಕ್ಯಾರಟ್‌ ಚಿನ್ನದ ದರ ಪ್ರತೀ ಗ್ರಾಂಗೆ 6,650 ರೂ ಇದ್ದು, 24 ಕ್ಯಾರೆಟ್‌ ಚಿನ್ನದ ಬೆಲೆ ಪ್ರತೀ ಗ್ರಾಂಗೆ 7,255 ರೂ ಇದೆ. ನಿನ್ನೆ ಮತ್ತು ಇಂದು ಚಿನ್ನದ ದರದಲ್ಲಿ ಯಾವುದೇ ರೀತಿಯ ಏರಿಕೆ ಕಂಡುಬಂದಿಲ್ಲ. ಇದು ಚಿನ್ನ ಖರೀದಿಸುವ ಗ್ರಾಹಕರಿಗೆ ಸಮಾಧಾನ ತಂದಿದೆ.

ಇಂದಿನ ಚಿನ್ನದ ದರ

ಬೆಳ್ಳಿ ದರ ಇಳಿಕೆ

ಅತ್ತ ಚಿನ್ನ ಗಗನಮುಖಿಯಾಗಿದ್ದರೂ ಬೆಳ್ಳಿ ದರಗಳು ಮಾತ್ರ ಇಂದು ಮತ್ತೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿಯ (Silver rate today) ಬೆಲೆಯಲ್ಲಿ 1 ರೂ 50ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರ 84.75ನಷ್ಟಿದೆ.

ಇಂದಿನ ಬೆಳ್ಳಿ ದರ
SCROLL FOR NEXT