ಸಾಂದರ್ಭಿಕ ಚಿತ್ರ 
ವಾಣಿಜ್ಯ

ಮೇ 31 ರೊಳಗೆ ಆಧಾರ್‌-ಪ್ಯಾನ್ ಲಿಂಕ್ ಆಗದಿದ್ದರೆ ಎರಡು ಪಟ್ಟು TDS ಕಡಿತ!

ಆದಾಯ ತೆರಿಗೆ ನಿಯಮಗಳ ಪ್ರಕಾರ PAN ಬಯೋಮೆಟ್ರಿಕ್ ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, TDS ಅನ್ನು ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ಕಡಿತಗೊಳಿಸಬೇಕಾಗುತ್ತದೆ.

ನವದೆಹಲಿ: ಮೇ 31ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಿದ್ದರೆ ಸಣ್ಣ ಪ್ರಮಾಣದ ಟಿಡಿಎಸ್ ಕಡಿತಕ್ಕೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಆದಾಯ ತೆರಿಗೆ ನಿಯಮಗಳ ಪ್ರಕಾರ PAN ಬಯೋಮೆಟ್ರಿಕ್ ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, TDS ಅನ್ನು ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ಕಡಿತಗೊಳಿಸಬೇಕಾಗುತ್ತದೆ.

ಟಿಡಿಎಸ್, ಟಿಸಿಎಸ್ ಅನ್ನು ನಿರ್ವಹಿಸುವಾಗ 'ಅಲ್ಪ ಕಡಿತ/ಕಲೆಕ್ಷನ್' ಡೀಫಾಲ್ಟ್ ಮಾಡಿದ್ದಾರೆ ಎಂದು ಸೂಚಿಸುವ ನೋಟೀಸ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಹಲವು ಕುಂದುಕೊರತೆಗಳನ್ನು ಸ್ವೀಕರಿಸಿರುವುದಾಗಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಸುತ್ತೋಲೆಯಲ್ಲಿ ತಿಳಿಸಿದೆ. ಅಂತಹ ಸಂದರ್ಭಗಳಲ್ಲಿ, ಹೆಚ್ಚಿನ ದರದಲ್ಲಿ ಕಡಿತ, ಸಂಗ್ರಹಣೆ ಮಾಡದ ಕಾರಣ, TDS/TCS ಹೇಳಿಕೆಗಳನ್ನು ಪ್ರಕ್ರಿಯೆಗೊಳಿಸುವಾಗ ಕಡಿತಗಾರರು, ಸಂಗ್ರಹಕಾರರ ವಿರುದ್ಧ ಇಲಾಖೆಯಿಂದ ಬೇಡಿಕೆಗಳನ್ನು ಎತ್ತಲಾಗಿದೆ.

ಅಂತಹ ಕುಂದುಕೊರತೆಗಳನ್ನು ಪರಿಹರಿಸಲು CBDT ಮಾರ್ಚ್ 31 ನಮೂದಿಸಿದ ವಹಿವಾಟುಗಳಿಗೆ ಮತ್ತು ಮೇ 31 ರಂದು ಅಥವಾ ಅದಕ್ಕೂ ಮುನ್ನಾ ಆಧಾರ್ ನೊಂದಿಗೆ ಪ್ಯಾನ್ ಲಿಂಕ್ ಮಾಡಿದರೆ ತೆರಿಗೆಯನ್ನು ಕಡಿತಗೊಳಿಸಲು ಯಾವುದೇ ಹೊಣೆಗಾರಿಕೆ ಇರುವುದಿಲ್ಲ. ಆಧಾರ್‌ನೊಂದಿಗೆ ಲಿಂಕ್ ಮಾಡದ ಕಾರಣ ಕಡಿತಗೊಳಿಸಿದವರ ಪ್ಯಾನ್ ನಿಷ್ಕ್ರಿಯವಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತೆರಿಗೆ ಕಡಿತಗಾರರಿಗೆ ಸುತ್ತೋಲೆ ಸ್ವಲ್ಪ ಪರಿಹಾರವನ್ನು ನೀಡುತ್ತದೆ ಎಂದು ಎಕೆಎಂ ಗ್ಲೋಬಲ್ ತೆರಿಗೆ ಪಾಲುದಾರ ಸಂದೀಪ್ ಸೆಹಗಲ್ ಹೇಳಿದ್ದಾರೆ. ಈ ಸಮಸ್ಯೆಯ ಕಾರಣದಿಂದ ಅಲ್ಪ ಕಡಿತಕ್ಕೆ ನೋಟಿಸ್‌ ಬಂದಿದ್ದರೆ ಮೇ 31 ಕ್ಕೂ ಮುನ್ನಾ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಅನ್ನು ತ್ವರಿತವಾಗಿ ಖಚಿತಪಡಿಸಿಕೊಳ್ಳುವುದು ಸೂಕ್ತ ಎಂದು ಅವರು ತಿಳಿಸಿದರು.

ಈ ನಿಬಂಧನೆಯು ಕಡಿತಗಾರರಿಗೆ ಗಣನೀಯ ಪರಿಹಾರವನ್ನು ನೀಡುತ್ತದೆ. ಹೆಚ್ಚಿನ ದರಗಳಲ್ಲಿ TDS/TCS ಅನ್ನು ಠೇವಣಿ ಮಾಡುವ ಅಥವಾ ಸಂಗ್ರಹಿಸುವ ಅಗತ್ಯದಿಂದ ಅವರನ್ನು ಉಳಿಸುತ್ತದೆ ಎಂದು ಸೆಹಗಲ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

ಕಳ್ಳಬಟ್ಟಿ ಸಾರಾಯಿ–ಸೇಂದಿ ದಂಧೆಕೋರರು ಗಡಿಪಾರು: ಸಚಿವ ತಿಮ್ಮಾಪುರ ಸೂಚನೆ

SCROLL FOR NEXT