ಸಾಂದರ್ಭಿಕ ಚಿತ್ರ  
ವಾಣಿಜ್ಯ

ಬಜೆಟ್ ಗೆ ವ್ಯಾಪಕ ಟೀಕೆ: ಆಸ್ತಿಗಳ ಮೇಲೆ LTCG ತೆರಿಗೆ ಪರಿಷ್ಕರಿಸಿದ ಕೇಂದ್ರ ಸರ್ಕಾರ

ಬಜೆಟ್ 2024-25 ಎಲ್ ಟಿಜಿಸಿಯನ್ನು ಶೇಕಡಾ 20ರಿಂದ ಶೇಕಡಾ 12.5ಕ್ಕೆ ಇಳಿಸಲು ಪ್ರಸ್ತಾಪಿಸಿದ್ದು, ಸೂಚ್ಯಂಕ ಪ್ರಯೋಜನಗಳು(indexation benefits) ತೆಗೆದುಹಾಕಿತು. ಹೊಸ ದರಗಳು ಜುಲೈ 23, 2024 ರಿಂದ ಜಾರಿಗೆ ಬಂದಿದೆ.

ನವದೆಹಲಿ: ಜುಲೈ 23, 2024 ರ ಮೊದಲು ಮನೆಗಳನ್ನು ಖರೀದಿಸಿದ ವ್ಯಕ್ತಿಗಳಿಗೆ ಭೂಮಿ ಮಾರಾಟದ ಮೇಲಿನ LTCG (ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ) ತೆರಿಗೆಗೆ ದೀರ್ಘಾವಧಿಯ ಬಂಡವಾಳ ಲಾಭದ ಮೇಲೆ ಎರಡು ತೆರಿಗೆ ದರಗಳ ನಡುವೆ ಆಯ್ಕೆ ನೀಡುವ ಮೂಲಕ ಸರ್ಕಾರವು ಮಹತ್ವದ ಪರಿಹಾರವನ್ನು ನಾಗರಿಕರಿಗೆ ಕಲ್ಪಿಸಿದೆ.

ಬಜೆಟ್ 2024-25 ಎಲ್ ಟಿಜಿಸಿಯನ್ನು ಶೇಕಡಾ 20ರಿಂದ ಶೇಕಡಾ 12.5ಕ್ಕೆ ಇಳಿಸಲು ಪ್ರಸ್ತಾಪಿಸಿದ್ದು, ಸೂಚ್ಯಂಕ ಪ್ರಯೋಜನಗಳು(indexation benefits) ತೆಗೆದುಹಾಕಿತು. ಹೊಸ ದರಗಳು ಜುಲೈ 23, 2024 ರಿಂದ ಜಾರಿಗೆ ಬಂದಿದೆ.

ಇಂಡೆಕ್ಸೇಶನ್ ಪ್ರಯೋಜನವು ಹಣದುಬ್ಬರಕ್ಕೆ ಸರಿಹೊಂದಿಸಿದ ನಂತರ ಬಂಡವಾಳ ಆಸ್ತಿಗಳ ಮಾರಾಟದಿಂದ ಉಂಟಾಗುವ ಲಾಭಗಳನ್ನು ಲೆಕ್ಕಾಚಾರ ಮಾಡಲು ತೆರಿಗೆದಾರರಿಗೆ ಅವಕಾಶ ಮಾಡಿಕೊಟ್ಟಿತು. ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳು ಎಲ್‌ಟಿಸಿಜಿ ತೆರಿಗೆ ಹೊರೆಯನ್ನು ಹೆಚ್ಚಿಸುತ್ತವೆ ಎಂದು ತೆರಿಗೆ ತಜ್ಞರು ಹೇಳುತ್ತಾರೆ.

ಲೋಕಸಭೆಯ ಸದಸ್ಯರಿಗೆ ವಿತರಿಸಲಾದ ಹಣಕಾಸು ಮಸೂದೆ, 2024 ರ ತಿದ್ದುಪಡಿಗಳ ಪ್ರಕಾರ, ಜುಲೈ 23, 2024 ರ ಮೊದಲು ಮನೆಗಳನ್ನು ಖರೀದಿಸಿದ ವ್ಯಕ್ತಿಗಳು ಅಥವಾ ಹೊಸ ಯೋಜನೆಯ ಅಡಿಯಲ್ಲಿ ತೆರಿಗೆಗಳನ್ನು ಶೇಡಾ 12.5 ಸೂಚ್ಯಂಕವಿಲ್ಲದೆ ಮತ್ತು ಹಳೆಯ ಯೋಜನೆ ಶೇಕಡಾ 20ರಷ್ಟು ಇಂಡೆಕ್ಸೇಶನ್ ಮತ್ತು ಎರಡಕ್ಕಿಂತ ಕಡಿಮೆ ತೆರಿಗೆಯನ್ನು ಪಾವತಿಸುವಂತೆ ಸೂಚಿಸಲಾಗಿದೆ.

ಬಜೆಟ್ ಮಂಡನೆ ನಂತರ ಆದಾಯ ತೆರಿಗೆ ಇಲಾಖೆಯು ರಿಯಲ್ ಎಸ್ಟೇಟ್ ವಲಯದಲ್ಲಿ ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆ (LTCG) ದರವನ್ನು ಕಡಿತಗೊಳಿಸಿರುವುದರಿಂದ ಬಹುಪಾಲು ತೆರಿಗೆದಾರರಿಗೆ 'ಗಣನೀಯ ತೆರಿಗೆ ಉಳಿತಾಯ' ನಿರೀಕ್ಷಿಸಲಾಗಿದೆ.

2024-25ರ ಬಜೆಟ್‌ನಲ್ಲಿ ತಂದ ಬದಲಾವಣೆಗಳ ಪ್ರಕಾರ, 2001 ರ ಮೊದಲು ಖರೀದಿಸಿದ ಅಥವಾ ಪಿತ್ರಾರ್ಜಿತವಾಗಿ ಪಡೆದ ಆಸ್ತಿಗಳ ಮೇಲಿನ ತೆರಿಗೆದಾರರಿಗೆ ಸೂಚ್ಯಂಕ ಪ್ರಯೋಜನವನ್ನು ಸರ್ಕಾರವು ಉಳಿಸಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT