ಸಾಂದರ್ಭಿಕ ಚಿತ್ರ 
ವಾಣಿಜ್ಯ

ದರ ಏರಿಕೆ: ಜಿಯೋ ಗ್ರಾಹಕರ ಸಂಖ್ಯೆ ಕುಸಿತ; VIL, ಏರ್‌ಟೆಲ್ ಬಳಕೆದಾರರಲ್ಲೂ ಇಳಿಕೆ!

ಜಿಯೋ ರೀಚಾರ್ಜ್ ದರ ಏರಿಕೆ ನಂತರ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿಐಎಲ್) ಸಂಸ್ತೆಗಳು ಕೂಡ ಬೆಲೆ ಏರಿಕೆ ಮಾಡಿದ್ದವು,ಇದರಿಂದ ಜುಲೈ 2024 ಮತ್ತು ಸೆಪ್ಟೆಂಬರ್ 2024 ರ ನಡುವೆ, ಜಿಯೋ ಬಳಕೆದಾರರಲ್ಲಿ ಅತಿದೊಡ್ಡ ಕುಸಿತ ಕಂಡಿದೆ.

ನವದೆಹಲಿ: ಇತ್ತೀಚೆಗೆ ದೇಶದ ಮೂರು ಟೆಲಿಕಾಂ ಸಂಸ್ಥೆಗಳು ತನ್ನ ಗ್ರಾಹಕರು ಬಳಸುವ ಪ್ಲಾನ್ ಗಳ ಮೇಲಿನ ಸುಂಕ ಏರಿಸಿತು, ಇದರ ಪರಿಣಾಮವಾಗಿ ದೇಶದ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ರಿಲಯನ್ಸ್ ಜಿಯೋ ಸುಂಕ ಹೆಚ್ಚಳದ ನಂತರ ಮೂರು ಖಾಸಗಿ ಟೆಲಿಕಾಂಗಳಲ್ಲಿ ಹೆಚ್ಚಿನ ಸಂಖ್ಯೆಯ ಚಂದಾದಾರರನ್ನು ಕಳೆದುಕೊಂಡಿದೆ.

ಜಿಯೋ ರೀಚಾರ್ಜ್ ದರ ಏರಿಕೆ ನಂತರ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿಐಎಲ್) ಸಂಸ್ತೆಗಳು ಕೂಡ ಬೆಲೆ ಏರಿಕೆ ಮಾಡಿದ್ದವು,ಇದರಿಂದ ಜುಲೈ 2024 ಮತ್ತು ಸೆಪ್ಟೆಂಬರ್ 2024 ರ ನಡುವೆ, ಜಿಯೋ ಬಳಕೆದಾರರಲ್ಲಿ ಅತಿದೊಡ್ಡ ಕುಸಿತ ಕಂಡಿದೆ. ಅಂದರೆ 10.94 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ. ಏರ್‌ಟೆಲ್ 5.27 ಮಿಲಿಯನ್ ಗ್ರಾಹಕರ ನಷ್ಟ ಅನುಭವಿಸಿದೆ, ಆದರೆ ವೊಡಾಫೋನ್ (VIL) ಅತ್ಯಂತ ಕಡಿಮೆ ಕುಸಿತ ಅಂದರೆ 4.80 ಮಿಲಿಯನ್ ಬಳಕೆದಾರರನ್ನು ಕಳೆದುಕೊಂಡಿತು.

ಜಿಯೋ ತನ್ನ ರೂ 239 ಪ್ಲಾನ್ ಗೆ ಶೇ.25 ಅಂದರೆ ರೂ 299 ಕ್ಕೆ ಹೆಚ್ಚಿಸಿದೆ. ರೂ 155 ರ ಮೂಲ ಪ್ಲಾನ್ ಶೇ. 22ರಷ್ಟು ಏರಿಕೆ ಕಂಡಿತು, ಅಂದರೆ ಹೊಸ ಪ್ಲಾನ್ ದರ ರೂ 189 ಕ್ಕೆ ಆಯಿತು. ರೂ 1,559 ಬೆಲೆಯ ಉನ್ನತ ಶ್ರೇಣಿಯ ಪ್ಲಾನ್ ರೂ 1,899 ಏರಿಕೆಯಾಗಿದೆ . ರೂ 479 ಮತ್ತು ರೂ 395 ಸೇರಿದಂತೆ ಇತರ ಯೋಜನೆಗಳು ಕ್ರಮವಾಗಿ 21% ಮತ್ತು 22% ರಷ್ಟು ಬೆಲೆ ಏರಿಕೆ ಕಂಡವು. ಏರ್‌ಟೆಲ್, ಹಲವಾರು ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಬೆಲೆಗಳನ್ನು ಹೆಚ್ಚಿಸಿದೆ, ಅಂದರೆ ಶೇ. 11 ರಿಂದ ಶೇ.21ವರೆಗೆ ಏರಿಕೆಯಾಗಿದೆ.

479 ರು ಪ್ಲಾನ್ (21% ಏರಿಕೆ) ಮತ್ತು ರೂ 2,999 ಪ್ಲಾನ್ (20% ಏರಿಕೆ) ಸೇರಿದಂತೆ ದೀರ್ಘಾವಧಿಯ ಯೋಜನೆಗಳಲ್ಲಿ ಹೆಚ್ಚಿನ ಹೆಚ್ಚಳ ಕಂಡುಬಂದಿದೆ. ರೂ 179 ಮತ್ತು ರೂ 265 ಆಯ್ಕೆಗಳಂತಹ ಅಲ್ಪಾವಧಿಯ ಪ್ಲಾನ್ ಶೇ. 11 ರಿಂದ ಶೇ. 13 ರಷ್ಟು ಹೆಚ್ಚು ಮಧ್ಯಮ ಏರಿಕೆಗಳನ್ನು ಕಂಡವು. ವೋಡಾಫೋನ್ ಇನ್ನೂ ಬೆಲೆ ಏರಿಕೆಗಳನ್ನು ಅನುಷ್ಠಾನಗೊಳಿಸುತ್ತಿದೆ, ಹೀಗಾಗಿ ಮೂರು ಟೆಲಿಕಾಂಗಳಲ್ಲಿ ವೋಡಾಫೋನ್ ಅತ್ಯಂತ ಕಡಿಮೆ ಏರಿಕೆ ಮಾಡಿದೆ. ಇದರ ಸುಂಕಗಳನ್ನು ಜುಲೈ 4, 2024 ರಿಂದ ಶೇ.11 ರಿಂದ ಶೇ. 21ಕ್ಕೆ ಹೆಚ್ಚಿಸಲಾಗಿದೆ.

ಏರ್‌ಟೆಲ್‌ನಂತೆಯೇ, ರೂ 479 ಮತ್ತು ರೂ 2,899 ಪ್ಲಾನ್‌ಗಳಂತಹ ದೀರ್ಘಾವಧಿಯ ವ್ಯಾಲಿಡಿಟಿ ಪ್ಲಾನ್‌ಗಳಲ್ಲಿ ಅತ್ಯಂತ ಮಹತ್ವದ ಬೆಲೆ ಏರಿಕೆ ಕಂಡುಬಂದಿದೆ, ಇದು 21% ರಷ್ಟು ಹೆಚ್ಚಾಗಿದೆ. 28-ದಿನಗಳ ಮಾನ್ಯತೆಯೊಂದಿಗೆ ಅಲ್ಪಾವಧಿಯ ಯೋಜನೆಗಳು ಸಹ ಪರಿಣಾಮ ಬೀರುತ್ತವೆ. ಏರಿಕೆಗಳ ಹೊರತಾಗಿಯೂ, VIL ನ ಕಡಿಮೆ ಹೆಚ್ಚಳವು ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕಡಿಮೆ ಚಂದಾದಾರರ ಕುಸಿತಕ್ಕೆ ಕಾರಣವಾಗಿದೆ. ಏತನ್ಮಧ್ಯೆ, ನೆರೆಯ ರಾಷ್ಟ್ರಗಳಲ್ಲಿ ಭಾರತವು ಕಡಿಮೆ ಸುಂಕವನ್ನು ಮುಂದುವರೆಸಿದೆ ಎಂದು ಸರ್ಕಾರ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT