ವಾಣಿಜ್ಯ

ಭಾರತದಲ್ಲಿನ ತಮ್ಮ ಹೂಡಿಕೆಗಳ ರಕ್ಷಣೆಗೆ ಕೋರಿ ರಾಯಭಾರ ಕಚೇರಿಗಳಿಗೆ NRI ಗಳ ಮನವಿ

Nagaraja AB

ಬೆಂಗಳೂರು: ವಿಶ್ವದಾದ್ಯಂತ ಭಾರತದ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳಿಗೆ ಆಗಮಿಸುತ್ತಿರುವ ಅನಿವಾಸಿ ಭಾರತೀಯರು, ಭಾರತದಲ್ಲಿನ ತಮ್ಮ ಹೂಡಿಕೆ ಮತ್ತು ಉಳಿತಾಯಕ್ಕೆ ರಕ್ಷಣೆ ಕೋರಿ ಮನವಿ ಸಲ್ಲಿಸುತ್ತಿದ್ದಾರೆ. ಇದು ಸ್ವಾತಂತ್ರ್ಯಾ ನಂತರ ವಿಶ್ವದಾದ್ಯಂತ ಎನ್‌ಆರ್‌ಐಗಳ ಅತಿದೊಡ್ಡ ಅಭಿಯಾನಗಳಲ್ಲಿ ಒಂದಾಗಿದೆ. 

ಎಲ್ಲಾ ಸ್ಥಳಗಳಲ್ಲಿ ಅವರ ಮನವಿ ಒಂದೇ ಆಗಿತ್ತು. ನಾವು ಪರಿಹಾರ ಕ್ರಮಗಳಿಗಾಗಿ ಸಂಘಟಿಸಿಕೊಂಡಿದ್ದೇವೆ. ಭಾರತದಲ್ಲಿ ಪ್ರತಿ ಮೂವರು ಅನಿವಾಸಿ ಭಾರತೀಯರಲ್ಲಿ ಒಬ್ಬರು ಬಲಿಪಶುವಾಗುತ್ತಿರುವ ಅನುಭವ ಪ್ರಾಥಮಿಕ ಡೇಟಾ ವಿಶ್ಲೇಷಣೆಯಿಂದ ತಿಳಿದುಬಂದಿದೆ. ರಾಷ್ಟ್ರೀಯ ಮಟ್ಟದಲ್ಲಿನ ತಮ್ಮ ಗಣನೀಯ ಕೊಡುಗೆಯನ್ನು ಪರಿಗಣಿಸಿ ಬೆಂಬಲಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಕಳವಳ ಪರಿಹರಿಸಲು ಎನ್‌ಆರ್‌ಐ ಸಂರಕ್ಷಣಾ ಮಸೂದೆ ಜಾರಿಗೊಳಿಸಲು ಪ್ರಸ್ತಾಪಿಸಿದ್ದಾರೆ. 

ಮೊದಲಿಗೆ ಹಾಂಗ್ ಕಾಂಗ್‌ನ ಪೂರ್ವ ಏಷ್ಯಾದ ಪ್ರದೇಶಗಳ ರಾಯಭಾರ ಕಚೇರಿಗಳಲ್ಲಿ ಮನವಿ ಮಾಡಿದ್ದಾರೆ. ತದನಂತರ ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ, ಗಲ್ಫ್ ರಾಷ್ಟ್ರಗಳು, ಯುರೋಪ್, ಅಮೆರಿಕ ಮತ್ತು ಕೆನಡಾದಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಎನ್ ಆರ್ ಐಗಳ ಅಂತರಾಷ್ಟ್ರೀಯ ಸಂಚಾಲಕರಾಗಿರುವ ಸುಭಾಸ್ ಬಾಳಪ್ಪನವರ್ ನೇತೃತ್ವದ ತಂಡದ ಸದಸ್ಯರು ಅಮೆರಿಕದಲ್ಲಿರುವ ಎಲ್ಲಾ ಏಳು ಕಾನ್ಸುಲರ್ ಕಚೇರಿಗಳನ್ನು ಸಂಪರ್ಕಿಸಿದ್ದಾರೆ.

ಆರಂಭದಲ್ಲಿ, ಭದ್ರತೆಯೊಂದಿಗೆ ಮನವಿ ಕೈಬಿಡುವಂತೆ  ನಮ್ಮನ್ನು ಅವರು ಕೇಳಿದರು. ಕಾನ್ಸುಲ್ ಜನರಲ್ ಅವರನ್ನು ಭೇಟಿ ಮಾಡಲು ಒತ್ತಾಯಿಸಿದೆ. ಅಂತಿಮವಾಗಿ 30 ನಿಮಿಷಗಳ ನಂತರ ಕಾನ್ಸುಲೇಟ್‌ನಲ್ಲಿ ಅಧಿಕಾರಿಗಳನ್ನು ಭೇಟಿಯಾದೆವು ಎಂದು  ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಭೇಟಿ ನೀಡಿದ ಬಾಳಪ್ಪನವರ್ ತಿಳಿಸಿದರು. 

SCROLL FOR NEXT