ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ವಾಣಿಜ್ಯ

ಶೀಘ್ರದಲ್ಲೇ ಫೋನ್‌ಗಳಲ್ಲಿ ನಂಬರ್ ಬದಲಿಗೆ ಕರೆ ಮಾಡುವವರ ಹೆಸರು ಡಿಸ್ಪ್ಲೇ!

Nagaraja AB

ನವದೆಹಲಿ: ಟೆಲಿಕಾಂ ಸೇವಾ ಪೂರೈಕೆದಾರರು ತನ್ನ ಬಳಕೆದಾರರಿಗೆ ಕಾಲರ್ ಐಡಿ ಸೌಲಭ್ಯ ಅಥವಾ ಕರೆ ಮಾಡುವವರ ನಂಬರ್ ಬದಲಿಗೆ ಅವರ ಹೆಸರನ್ನು ತೋರಿಸುವ (ಸಿಎನ್‌ಎಪಿ) ವೈಶಿಷ್ಟ್ಯಗಳನ್ನು ಪೂರಕ ಸೇವೆಗಳಾಗಿ ಒದಗಿಸಬೇಕಾಗುತ್ತದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಶುಕ್ರವಾರ ಶಿಫಾರಸು ಮಾಡಿದೆ.

ಈ ವೈಶಿಷ್ಟ್ಯದೊಂದಿಗೆ, ಬಳಕೆದಾರರ ಫೋನ್ TRAI ಒದಗಿಸಿದ ಹೆಸರನ್ನು ಪ್ರದರ್ಶಿಸುತ್ತದೆ. ಎಲ್ಲಾ ಸೇವಾ ಪೂರೈಕೆದಾರರು ವಿನಂತಿಯ ಮೇರೆಗೆ ತಮ್ಮ ದೂರವಾಣಿ ಚಂದಾದಾರರಿಗೆ ಕರೆ ಮಾಡುವವರ ಹೆಸರು ತೋರಿಸುವ (CNAP) ಪೂರಕ ಸೇವೆ ಒದಗಿಸಬೇಕು TRAI ಹೇಳಿಕೆಯಲ್ಲಿ ತಿಳಿಸಿದೆ.

ದೂರಸಂಪರ್ಕ ಇಲಾಖೆ ಈ ಶಿಫಾರಸನ್ನು ಒಪ್ಪಿಕೊಂಡರೆ ಒಂದು ನಿರ್ಧಿಷ್ಟ ದಿನಾಂಕದ ನಂತರ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ ಗಳಲ್ಲಿ CNAP ವೈಶಿಷ್ಟ್ಯ ಲಭ್ಯವಾಗುವಂತೆ ಮಾಡಲು ಸರ್ಕಾರ ಸೂಚನೆ ನೀಡಬಹುದು.

ಕರೆ ಮಾಡುವವರ ಹೆಸರು ಬಾರದ ಹಿನ್ನೆಲೆಯಲ್ಲಿ ಅಪರಿಚಿತರು ಕರೆ ಸ್ವೀಕರಿಸಬೇಕಾಗುತ್ತದೆ ಎಂದು ಅನೇಕ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದರಿಂದ ಈ ವೈಶಿಷ್ಟ್ಯಗಳ ಅಗತ್ಯತೆ ಕಂಡುಬಂದಿದೆ. ಇವುಗಳಲ್ಲಿ ಬಹುತೇಕ ನೋಂದಾಣಿಯಾಗದ ಟೆಲಿಮಾರ್ಕೆಟರ್ ಗಳಿಂದ ಬರುವಂತಹ ಕರೆಗಳಾಗಿದ್ದು, ಕೆಲವೊಮ್ಮೆ ತಜ್ಞರು ಕೂಡಾ ಉತ್ತರ ನೀಡದಂತಾಗಿದೆ.

ಬೃಹತ್ ಸಂಪರ್ಕಗಳು ಮತ್ತು ವ್ಯಾಪಾರ ಸಂಪರ್ಕ ಹೊಂದಿರುವ ಚಂದಾದಾರರ ಘಟಕಗಳಿಗೆ ಗ್ರಾಹಕರ ಅರ್ಜಿ ನಮೂನೆಯಲ್ಲಿ (CAF) ಕಂಡುಬರುವ ಹೆಸರಿನ ಬದಲಿಗೆ ತಮ್ಮ "ಆದ್ಯತೆಯ ಹೆಸರನ್ನು" ಪ್ರಸ್ತುತಪಡಿಸುವ ಸೌಲಭ್ಯವನ್ನು ನೀಡಲಾಗುವುದು ಎಂದು TRAI ಶಿಫಾರಸು ಮಾಡಿದೆ.

SCROLL FOR NEXT