ಮುಕೇಶ್ ಅಂಬಾನಿ 
ವಾಣಿಜ್ಯ

ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿ ಅತ್ಯಂತ ಯಶಸ್ವಿ ಪ್ರಧಾನಿ, ರಿಲಯನ್ಸ್ ಯಾವತ್ತಿಗೂ ಗುಜರಾತಿ ಸಂಸ್ಥೆ: ಮುಕೇಶ್ ಅಂಬಾನಿ

ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿ ಅವರು ಅತ್ಯಂತ ಯಶಸ್ವಿ ಪ್ರಧಾನಿ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ನವದೆಹಲಿ: ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿ ಅವರು ಅತ್ಯಂತ ಯಶಸ್ವಿ ಪ್ರಧಾನಿ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಗಾಂಧಿನಗರದಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ನಾನು ಗೇಟ್‌ವೇ ಆಫ್ ಇಂಡಿಯಾ ನಗರದಿಂದ ಆಧುನಿಕ ಭಾರತದ ಬೆಳವಣಿಗೆಯ ಹೆಬ್ಬಾಗಿಲಿಗೆ ಬಂದಿದ್ದೇನೆ. ನಾನು ಹೆಮ್ಮೆಯ ಗುಜರಾತಿ, ವಿದೇಶಿಗರು ನವ ಭಾರತದ ಬಗ್ಗೆ ಯೋಚಿಸುವಾಗ, ನವ ಗುಜರಾತ್ ಬಗ್ಗೆ ಯೋಚಿಸುತ್ತಾರೆ. ಈ ರೂಪಾಂತರವು ಹೇಗೆ ಉಂಟಾಯಿತು ಎಂದು ಯೋಚಿಸಿದರೆ ಅದು ಒಬ್ಬ ನಾಯಕನ ಕಾರಣದಿಂದಾಗಿ. ನಮ್ಮ ಕಾಲದ ಶ್ರೇಷ್ಠ ಜಾಗತಿಕ ನಾಯಕರಾಗಿ ಹೊರಹೊಮ್ಮಿದವರು ಪ್ರಧಾನಿ ಮೋದಿ. ಭಾರತದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಪ್ರಧಾನಿ ಮೋದಿಯವರು ಎಂದು ಶ್ಲಾಘಿಸಿದರು. 

2047 ರ ವೇಳೆಗೆ ಗುಜರಾತ್ ರಾಜ್ಯವೊಂದೇ 3 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ; 2047 ರ ವೇಳೆಗೆ ಭಾರತವು 35 ಟ್ರಿಲಿಯನ್ ಆರ್ಥಿಕತೆಯಾಗುವುದನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ ಎಂದರು.

ರಿಲಯನ್ಸ್ ಗುಜರಾತ್ ಕಂಪೆನಿ: ರಿಲಯನ್ಸ್ ಗುಜರಾತಿ ಕಂಪನಿಯಾಗಿಯೇ ಉಳಿದುಕೊಂಡಿದೆ ಮತ್ತು ಮುಂದೆಯೂ ಯಾವಾಗಲೂ ಗುಜರಾತಿ ಕಂಪೆನಿಯಾಗಿಯೇ ಉಳಿಯುತ್ತದೆ. ರಿಲಯನ್ಸ್ ಕಳೆದ 10 ವರ್ಷಗಳಲ್ಲಿ ಭಾರತದಾದ್ಯಂತ ವಿಶ್ವದರ್ಜೆಯ ಆಸ್ತಿ ಮತ್ತು ಸಾಮರ್ಥ್ಯಗಳನ್ನು ಸೃಷ್ಟಿಸಲು 12 ಲಕ್ಷ ಕೋಟಿ ರೂಪಾಯಿ ಮತ್ತು ವಿಶ್ವಾದ್ಯಂತ 150 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಇದರಲ್ಲಿ 1/ 3ನೇ ಗುಜರಾತಿನಲ್ಲೇ ಹೂಡಿಕೆ ಮಾಡಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Strait of Hormuz: 'ಅಡ್ಡ ಬರುವ Iran ಸಣ್ಣ ಬೋಟ್ ಗಳ ಗುಂಡಿಟ್ಟು ಉಡಾಯಿಸಿ': ಅಮೆರಿಕ ಸೇನೆಗೆ Donald Trump ಆದೇಶ!

ಸ್ವಾತಂತ್ರ್ಯದ ನಂತರ ತಮಿಳುನಾಡು, ಪ.ಬಂಗಾಳದಲ್ಲಿ ದಾಖಲೆ ಪ್ರಮಾಣದ ಮತದಾನ, ಮತದಾರರಿಗೆ ಧನ್ಯವಾದ ಹೇಳಿದ ಚುನಾವಣಾ ಆಯೋಗ!

Hassan: 'ಬಡ್ಡಿ ಸಮೇತ ತೀರಿಸೋವರ್ಗೂ ರಾಜಕೀಯದಲ್ಲಿ ಇರ್ತೀನಿ': ಎಚ್ ಡಿಕೆ ಮುಂದೆಯೇ HD Revanna ಕಣ್ಣೀರಿನ ಶಪಥ

IPL 2026: ಮತ್ತೆ ಮುಗ್ಗರಿಸಿದ MI, 103 ರನ್ ಅಂತರದಲ್ಲಿ CSKಗೆ ಜಯ!

IPL 2026: MI ವಿರುದ್ಧ ಸ್ಫೋಟಕ ಬ್ಯಾಟಿಂಗ್, ಶತಕದ ಮೂಲಕ ಐತಿಹಾಸ ನಿರ್ಮಿಸಿದ Sanju Samson, ಎಲೈಟ್ ಗ್ರೂಪ್ ಸೇರ್ಪಡೆ

SCROLL FOR NEXT